ಬೀದರ್ : ಚೆಕ್ ಬೌನ್ಸ್ ಪ್ರಕರಣ ಸಂಬಂಧ ಬೀದರ್ನ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ FIR ದಾಖಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದ್ದು, ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಎಂಬುವರು ಶಾಸಕರ ವಿರುದ್ಧ ದೂರು ನೀಡಿದ್ದಾರೆ.

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಸಲಗರ್ ಶಾಸಕ ಶರಣು ಸಲಗರ ಅವರು ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಅವರಿಂದ 99 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಸಾಲ ಪಡೆಯುವ ವೇಳೆ ಶ್ಯೂರಿಟಿಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ ಸೈನ್ ಮಾಡಿ ಕೊಟಿದ್ದರಂತೆ. ಆದರೆ ಕೊಟ್ಟ ಸಾಲವನ್ನ ಎಷ್ಟೇ ಬಾರಿ ಹಣ ಕೇಳಿದರೂ ಶಾಸಕ ಸಲಗರ್ ಮರುಪಾವತಿಸಿಲ್ಲ.

ನಿಗದಿತ ಅವಧಿಯೊಳಗೆ ಹಣವನ್ನು ಮರುಪಾವತಿಸದ ಕಾರಣ, ಉದ್ಯಮಿ ನೀಡಿದ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ ಅದು ಬೌನ್ಸ್ ಆಗಿದೆ. ಈ ಘಟನೆಯ ನಂತರ, ಸಂಜೀವ್ ಕುಮಾರ್ ಸುಗುರೆ ಅವರು ಶಾಸಕ ಶರಣು ಸಲಗರ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ಪೊಲೀಸರು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.



ಇದನ್ನೂ ಓದಿ : ಬೆಂಗಳೂರಿನಲ್ಲಿ ಮೂರು ಡ್ರಗ್ ಫ್ಯಾಕ್ಟರಿ ಪತ್ತೆ ಪ್ರಕರಣ – ಸುಮೋಟೋ ಕೇಸ್ ದಾಖಲು.. ತನಿಖೆ ಚುರುಕು!







