ಬೆಂಗಳೂರಿನಲ್ಲಿ ಮೂರು ಡ್ರಗ್ ಫ್ಯಾಕ್ಟರಿ ಪತ್ತೆ ಪ್ರಕರಣ – ಸುಮೋಟೋ ಕೇಸ್ ದಾಖಲು.. ತನಿಖೆ ಚುರುಕು!

ಬೆಂಗಳೂರು : ಬೆಂಗಳೂರಿನಲ್ಲಿ ಪತ್ತೆಯಾದ ಮೂರು ಡ್ರಗ್ ಫ್ಯಾಕ್ಟರಿ ಪತ್ತೆ ಪ್ರಕರಣ ಸಿಸಿಬಿ ಕ್ರೈಂ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಇದೀಗ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪೊಲೀಸರು ಕಟ್ಟಡ, ಶೆಡ್ ಜಾಗಗಳ ಮಾಲೀಕರ ಮೇಲೆ ಕ್ರಮಕ್ಕೂ ಮುಂದಾಗಿದ್ದು, ಮಾಲೀಕರ ನಿರ್ಲಕ್ಷ್ಯ ಹಿನ್ನೆಲೆ ಅವರ ಮೇಲೂ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಪೊಲೀಸರಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳನ್ನು ಸಿಸಿಬಿ ಪಡೆದುಕೊಂಡಿದೆ. ಪತ್ತೆಯಾದ ಫ್ಯಾಕ್ಟರಿಗಳಲ್ಲಿ ಮತ್ತೊಮ್ಮೆ ವೈಜ್ಞಾನಿಕವಾಗಿ ಸ್ಥಳ ಮಹಜರು ನಡೆಸಿ, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಗೃಹ ಸಚಿವರು ನಡೆಸಿದ ತುರ್ತು ಸಭೆಯ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಕಮಿಷನರ್ ಎಲ್ಲಾ ಠಾಣಾ ಇನ್ಸ್‌ಪೆಕ್ಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಹೊರವಲಯ ಮತ್ತು ನಿರ್ಜನ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಲು, ಔಟ್‌ಸ್ಕರ್ಟ್‌ಗಳಲ್ಲಿರುವ ಗೋಡೌನ್ ಮತ್ತು ಶೆಡ್‌ಗಳ ಮೇಲೆ ನಿರಂತರ ನಿಗಾ ಇಡುವಂತೆ ಕಮಿಷನರ್ ಆದೇಶಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮುಂದುವರಿದ ಪುಡಿರೌಡಿಗಳ ಅಟ್ಟಹಾಸ – ನಡುರಸ್ತೆಯಲ್ಲೇ ಮಾರಣಾಂತಿಕ ದಾಳಿ!

Btv Kannada
Author: Btv Kannada

Read More