ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪುಡಿರೌಡಿಗಳ ಅಟ್ಟಹಾಸ ಮುಂದುವರಿದಿದ್ದು, ನಡುರಸ್ತೆಯಲ್ಲೇ ಹೆಲ್ಮೆಟ್ ಹಾಕ್ಕೊಂಡು ಪುಡಿ ರೌಡಿಗಳು ಮಾರಾಮಾರಿ ಮಾಡಿರುವ ಘಟನೆ ನಗರದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರೌಡಿಗಳು ಇಬ್ಬರು ಯುವಕರನ್ನು ಫಿನಿಷ್ ಮಾಡೋಕೆ ಬಂದಿದ್ದರು. ಕಾರಿನಲ್ಲಿ ಕುಳಿತಿದ್ದವರ ಮೇಲೆ ಬೈಕ್ – ಕಾರಿನಲ್ಲಿ ಬಂದು ರೌಡಿಗಳು ಅಟ್ಯಾಕ್ ಮಾಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಯುವಕರು ಗ್ರೇಟ್ ಎಸ್ಕೇಪ್ ಆಗಿದ್ದಾರೆ.

ಮಾರಾಮಾರಿಯಲ್ಲಿ ಕಾರಿನಲ್ಲಿದ್ದ ಬಷೀರ್ ಎಂಬಾತನಿಗೆ ಮಚ್ಚೇಟಿನ ಗಾಯವಾಗಿದ್ದು, ಬಷೀರ್ ಕೈಗೆ ಸಿಗ್ಲಿಲ್ಲ ಅನ್ನೋ ಕಾರಣಕ್ಕೆ ಬೀಡಾ ಅಂಗಡಿ ಪುಡಿ ಪುಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪುಂಡ ರೌಡಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಭಾರೀ ಅಗ್ನಿ ಅವಘಡ – ಸುಟ್ಟು ಭಸ್ಮವಾದ ಉಡುಪಿ ಕೃಷ್ಣ ಪ್ಯಾಲೇಸ್ ಹೋಟೆಲ್!
Author: Btv Kannada
Post Views: 155







