ತುಮಕೂರು : ಕೇಂದ್ರ ಸಚಿವ ವಿ.ಸೋಮಣ್ಣ ವಿರುದ್ಧ ಅವರ ಸ್ವಕ್ಷೇತ್ರದಲ್ಲೇ ಈಗ ಆಕ್ರೋಶ ಭುಗಿಲೆದ್ದಿದೆ. ತುಮಕೂರಿನಲ್ಲಿ ಬಿಜೆಪಿ ನಾಯಕರು ಸೋಮಣ್ಣ ವಿರುದ್ಧ ತಿರುಗಿ ಬಿದ್ದಿದ್ದು, ಹಿರಿಯ ನಾಯಕ, ಮಾಜಿ ಸಂಸದ ಜಿ.ಎಸ್. ಬಸವರಾಜು ಅವರು ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ.
ನೊಳಂಬ ಲಿಂಗಾಯಿತ ಸಮುದಾಯದ ಸಭೆಯಲ್ಲಿ ಮಾತನಾಡಿದ ಜಿ.ಎಸ್. ಬಸವರಾಜು ಅವರು, ಸೋಮಣ್ಣನನ್ನು ಗೆಲ್ಲಿಸಿ ತಪ್ಪು ಮಾಡಿಬಿಟ್ಟೆ, ನನ್ನ ಬಾಯಿಯಿಂದ ಅವನ ಹೆಸರು ಹೇಳಿದ್ರೆ ಕುಲಗೆಟ್ಟು ಹೋಗುತ್ತೆ ಎಂದು ನೊಳಂಬ ಸಮುದಾಯಕ್ಕೆ ಕ್ಷಮೆ ಯಾಚಿಸಿದ್ದಾರೆ.
ವಿ.ಸೋಮಣ್ಣ ಗೆಲ್ಲೋವರೆಗೂ ಒಂಥರ ಇದ್ದು ಗೆದ್ದ ಮೇಲೆ ಬದಲಾಗೋದಾ, ಬಿಜೆಪಿ ವಿರೋಧಿಗಳನ್ನು ಉದ್ದೇಶಪೂರ್ವಕವಾಗಿ ಸೋಮಣ್ಣ ಹೊಗುಳುತ್ತಾನೆ. ನನ್ನ ವಿರೋಧಿಗಳನ್ನು ಜೊತೆಯಲ್ಲಿ ಕೂರಿಸಿಕೊಂಡು ಹೊಗುಳುತ್ತಾನೆ, ಅವನ ಮುಖ ಮೊದಲು ಚೆನ್ನಾಗಿತ್ತು, ಗೆದ್ದ ಮೇಲೆ ಬದಲಾಗೋದಾ ಎಂದು ಜಿ.ಎಸ್ ಬಸವರಾಜು ನೊಳಂಬ ಲಿಂಗಾಯಿತ ಸಭೆಯಲ್ಲಿ ವಿ.ಸೋಮಣ್ಣ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರ ಗೆದ್ದರೂ ವಿ.ಸೋಮಣ್ಣ ಕಾರಣಕ್ಕೆ ಜಿಲ್ಲಾ ಬಿಜೆಪಿ ನಾಯಕರ ನಡುವಿನ ಗುದ್ದಾಟ ದಿನೇ ದಿನೇ ಹೆಚ್ಚಾಗುತ್ತಿದೆ. ವಿ.ಸೋಮಣ್ಣ & ತುಮಕೂರು ಜಿಲ್ಲಾ ಬಿಜೆಪಿ ನಾಯಕರ ನಡುವೆ ಜಗಳ ಶುರುವಾಗಿದ್ದು, ಇದೀಗ ಬಹಿರಂಗ ವೇದಿಕೆಯಲ್ಲೇ ಸೋಮಣ್ಣ ವಿರುದ್ಧ ಬಸವರಾಜು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ನಾಯಕರ ನಡುವಿನ ಒಳ ‘ಸಖ್ಯ’ ಉಲ್ಲೇಖಿಸಿ ‘ಕೇಸರಿ’ ಪಡೆ ಗರಂ ಆಗಿದೆ.
ಇದನ್ನೂ ಓದಿ : BMTC ಬಸ್ ಟೈರ್ ಸ್ಫೋಟ – ಓರ್ವ ಪ್ರಯಾಣಿಕನಿಗೆ ಗಾಯ!







