ಭಾರೀ ಅಗ್ನಿ ಅವಘಡ – ಸುಟ್ಟು ಭಸ್ಮವಾದ ಉಡುಪಿ ಕೃಷ್ಣ ಪ್ಯಾಲೇಸ್ ಹೋಟೆಲ್!

ವಿಜಯಪುರ : ಅಗ್ನಿ ಅವಘಡದಿಂದ ಉಡುಪಿ ಕೃಷ್ಣ ಪ್ಯಾಲೆಸ್ ಹೊತ್ತಿ ಉರಿದ ಘಟನೆ ವಿಜಯಪುರ ನಗರದ ಸೋಲಾಪುರ ರಸ್ತೆ ಬಳಿ ನಡೆದಿದೆ. ತಡರಾತ್ರಿ ಸಂಭವಿಸಿದ ಅಗ್ನಿ ಅವಘಡಕ್ಕೆ ಮೂರು ಅಂತಸ್ತಿನ ಹೋಟೆಲ್‌ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದು, ಕೊನೆಗೂ ಬೆಂಕಿ ನಂದಿಸುವಲ್ಲಿ ಯಸ್ವಿಯಾಗಿದ್ದಾರೆ.

ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಗ್ಯಾಸ್ ಲೀಕ್ ಅಥವಾ ವಿದ್ಯುತ್ ಶಾಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : BMTC ಬಸ್ ಟೈರ್ ಸ್ಫೋಟ – ಓರ್ವ ಪ್ರಯಾಣಿಕನಿಗೆ ಗಾಯ!

Btv Kannada
Author: Btv Kannada

Read More