ಬೆಂಗಳೂರು : ಬಿಎಂಟಿಸಿ ಬಸ್ ಟೈರ್ ಸ್ಫೋಟಗೊಂಡು ಓರ್ವ ಗಾಯಗೊಂಡ ಘಟನೆ ನಗರದ ಸಿಂಗಸಂದ್ರದಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.
ನಿನ್ನೆ ಬಸ್ ಅತ್ತಿಬೆಲೆಯಿಂದ ಮೆಜೆಸ್ಟಿಕ್ ಕಡೆ ಹೋರಟಿತ್ತು. ಈ ವೇಳೆ ಬಸ್‌ನ ಟೈರ್ ಸ್ಫೋಟಗೊಂಡಿದೆ. ಇದರಿಂದ ಬಸ್‌ನ ಟೈರ್ ಬಳಿಯ ಸೀಟ್‌ಗೂ ಹಾನಿಯಾಗಿದೆ. ಅಲ್ಲದೇ ಕೆಳಭಾಗದಲ್ಲಿ ಛಿದ್ರವಾಗಿ ಬಸ್ ತುಂಬ ಧೂಳು ಆವರಿಸಿದೆ.
ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಫೋಟದಿಂದ ಉಂಟಾದ ಶಬ್ದದಿಂದ ಜನ ಕೆಲಕಾಲ ಕಂಗಾಲಾಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ : ಮಲೇಷ್ಯಾದಲ್ಲಿ ಇತಿಹಾಸ ಸೃಷ್ಟಿಸಿದ ‘ಜನನಾಯಕನ್’ ಆಡಿಯೋ ಲಾಂಚ್ – ದಾಖಲೆ ಬರೆದ ದಳಪತಿ ವಿಜಯ್ ಅಭಿಮಾನಿಗಳ ಸಾಗರ!
Author: Btv Kannada
Post Views: 182







