ಸಿಎಂ ಮಾಡೋನು ನಾನಲ್ಲ, ಆಗೋನು ನಾನಲ್ಲ – ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ತಿಮ್ಮಾಪೂರ್ ಖಡಕ್ ರಿಯಾಕ್ಷನ್!

ಕಲಬುರಗಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ್, ಮುಖ್ಯಮಂತ್ರಿ ಮಾಡುವವನೂ ನಾನಲ್ಲ, ಆಗುವವನೂ ನಾನಲ್ಲ ಎಂದು ಹೇಳುವ ಮೂಲಕ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜಕೀಯ ನಾಯಕರಿಗೆ ಸಿಎಂ ಆಗುವ ಕನಸಿರುವುದು ಸಹಜ. ಆದರೆ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು, ಗೊಂದಲಗಳನ್ನು ಸರಿಪಡಿಸಲಿದೆ ಎನ್ನುವ ಮೂಲಕ ನಾಯಕತ್ವ ಬದಲಾವಣೆ ಚರ್ಚೆ ಹಾಗೂ ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.

ಇದೇ ವೇಳೆ ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ತಿಮ್ಮಾಪೂರ್, ಬಿಜೆಪಿ ಆಡಳಿತ ವೈಖರಿ ಲೇವಡಿ ಮಾಡಿದ ತಿಮ್ಮಾಪೂರ್, ಹಿಂದಿನ ಅವಧಿಯಲ್ಲಿ. ನಾವು ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿದ್ದನ್ನು ನೋಡಿದ್ದೇವೆ. ಬಿಜೆಪಿಯವರು ಬರೀ ಮಾತನಾಡುತ್ತಾರೆ. ಒಂದು ವೇಳೆ ಅವರು ನಾಳೆ ಅಧಿಕಾರಕ್ಕೆ ಬಂದರೆ, ಸರಿಯಾಗಿ ಅಧಿಕಾರ ನಡೆಸಲು ಅವರಿಗೆ ಸಾಧ್ಯವಿದೆಯೇ?, ಬಿಜೆಪಿಯವರು ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು, ತಮ್ಮ ಪಕ್ಷವನ್ನು ಕಟ್ಟುವುದರ ಕಡೆಗೆ ಗಮನ ಹರಿಸಲಿ, ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ : ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಘಟನೆ – ಸಿಡಿಮದ್ದು ಸ್ಫೋಟಗೊಂಡು ವ್ಯಕ್ತಿಗೆ ಗಂಭೀರ ಗಾಯ!

Btv Kannada
Author: Btv Kannada

Read More