ಬೈಕ್ ಮತ್ತು ಟಿಪ್ಪರ್​ ನಡುವೆ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ಬೈಕ್ ಸವಾರ ಸಾವು, ದೇಹ ಛಿದ್ರ ಛಿದ್ರ!

ಹಾವೇರಿ : ಹಾನಗಲ್ ತಾಲೂಕಿನ ಅಕ್ಕಿಆಲೂರು ಸಮೀಪದ ಕಲ್ಲಾಪುರ ಕ್ರಾಸ್ ಬಳಿ ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಅಕ್ಕಿವಳ್ಳಿ ಗ್ರಾಮದ ಹನಮಂತಪ್ಪ ಬಿದರಿಕೊಪ್ಪ (23). ಬೈಕ್‌ನಲ್ಲಿ ಹಾವೇರಿಯತ್ತ ತೆರಳುತ್ತಿದ್ದಾಗ, ಎದುರಿನಿಂದ ಬಂದ ಟಿಪ್ಪರ್ ಕಲ್ಲಾಪುರ ಕ್ರಾಸ್ ಬಳಿ ಡಿಕ್ಕಿ ಹೊಡೆದಿದೆ

ಅಪಘಾತದ ಭೀಕರತೆಗೆ ಟಿಪ್ಪರ್ ಚಕ್ರದಡಿ ಸಿಲುಕಿದ ಹನಮಂತಪ್ಪ ಅವರ ದೇಹ ರಸ್ತೆಯಲ್ಲೇ ಛಿದ್ರಗೊಂಡಿದೆ. ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಾನಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ – ಜಲಪಾತ ಬಂಡೆಗಳ ಮೇಲೆ ನಿಂತು ಪ್ರವಾಸಿಗರ ಮೋಜು-ಮಸ್ತಿ!

Btv Kannada
Author: Btv Kannada

Read More