ಬಂಡೀಪುರದಲ್ಲಿ ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ!

ಚಾಮರಾಜನಗರ : ಹುಲಿ ದಾಳಿಯಿಂದ ಅರಣ್ಯ ಇಲಾಖೆಯ ವಾಚರ್ ಸಾವನ್ನಪ್ಪಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ. ಸಣ್ಣಹೈದ ಹುಲಿ ದಾಳಿಗೆ ಬಲಿಯಾದ ವಾಚರ್‌.
ಸಣ್ಣಹೈದ ಬಂಡೀಪುರದ ಮರಳಳ್ಳ ಕ್ಯಾಂಪ್ ಸಮೀಪ ಗಸ್ತಿಗೆ ಹೋಗಿದ್ದರು. ಈ ವೇಳೆ ಹುಲಿ ದಾಳಿ ನಡೆಸಿ ಅವರನ್ನು ಕೊಂದು ಹಾಕಿದೆ. ಸಣ್ಣಹೈದ ಅವರು ಕಳೆದ 8 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹುಲಿ ದಾಳಿ ನಡೆಸಿದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ : ನ್ಯೂ ಇಯರ್ ಸೆಲೆಬ್ರೇಷನ್ – ಬೆಂಗಳೂರು ಪೊಲೀಸರಿಂದ ಪಬ್‌, ಕ್ಲಬ್‌, ಬಾರ್‌ಗಳಿಗೆ ಮಾರ್ಗಸೂಚಿ ಬಿಡುಗಡೆ!

Btv Kannada
Author: Btv Kannada

Read More