ಎತ್ತಿನ ಬಂಡಿಗೆ ಬೈಕ್ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಸಾವು!

ವಿಜಯನಗರ : ಹರಪನಹಳ್ಳಿ ತಾಲೂಕಿನ ಸಾಸಿವೆಹಳ್ಳಿ-ಹುಣಸಿಹಳ್ಳಿ ಮಧ್ಯೆ ಎತ್ತಿನ ಬಂಡಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಶಿವಕುಮಾರ್ (37) ಮತ್ತು ರವಿಕುಮಾರ್ (41). ವೇಗವಾಗಿ ಬಂದ ಬೈಕ್ ಬಂಡಿಗೆ ಗುದ್ದಿದ ರಭಸಕ್ಕೆ ಸವಾರರಿಬ್ಬರ ತಲೆ ಹಾಗೂ ಮೈಕೈಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾ

ಹರಪನಹಳ್ಳಿ ಡಿವೈಎಸ್ಪಿ ಡಾ.ಸಂತೋಷ್ ಚೌವ್ಹಾಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ : ಮೈಸೂರು ಅರಮನೆ ಬಳಿ ಭೀಕರ ದುರಂತ – ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಓರ್ವ ಬಲಿ, ಹಲವರಿಗೆ ಗಂಭೀರ ಗಾಯ! 

Btv Kannada
Author: Btv Kannada

Read More