ಭೀಕರ ಬಸ್ ದುರಂತ – ಅಪಘಾತದ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ನೆಲಮಂಗಲ : ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಬಸ್​​ ಭೀಕರ ರಸ್ತೆ ಅಪಘಾತದಲ್ಲಿ ಹೊತ್ತಿ ಉರಿದ ಪರಿಣಾಮ 10 ಮಂದಿ ಸಜೀವ ದಹನವಾಗಿದ್ದಾರೆ. ಈ ಬಸ್ ದುರಂತದಿಂದ ಇಡೀ ರಾಜ್ಯವೇ ಬೆಚ್ಚಿ ಬಿದಿದ್ದು, ಬಸ್ ಅಪಘಾತದ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಭೀಕರ ಅಗ್ನಿ ಅವಘಡಕ್ಕೀಡಾಗುವ ಕೆಲವೇ ಕ್ಷಣಗಳ ಮೊದಲು ಬಸ್ ಸಂಚರಿಸಿದ್ದ ಸಿಸಿಟಿವಿ ದೃಶ್ಯಾವಳಿಗಳು ಈಗ ಲಭ್ಯವಾಗಿವೆ. ನೆಲಮಂಗಲ-ತುಮಕೂರು ರಸ್ತೆಯ ಈ ಟೋಲ್ ದಾಟಿದ ಕೆಲವೇ ಹೊತ್ತಿನಲ್ಲಿ ವಿಧಿ ಆಟವಾಡಿದ್ದು, ಬಸ್ ಚಿತ್ರದುರ್ಗದ ಬಳಿ ಭೀಕರ ಅಗ್ನಿ ಅವಘಡಕ್ಕೆ ತುತ್ತಾಗಿದೆ.

ರಾತ್ರಿ 11.16ಕ್ಕೆ ಬಸ್ ನೆಲಮಂಗಲ-ತುಮಕೂರು ಟೋಲ್ ಪಾಸ್ ಆಗಿದ್ದು, ಟೋಲ್ ಮೂಲಕ ಸಾಗಿ ಕೆಲ ಹೊತ್ತಲ್ಲೇ ಬಸ್ ಬೆಂಕಿಗಾಹುತಿಯಾಗಿದೆ. ಈ ಭೀಕರ ದುರಂತದಲ್ಲಿ ದುರದೃಷ್ಟವಶಾತ್ 10 ಮಂದಿ ಪ್ರಯಾಣಿಕರು ಹೊರಬರಲಾಗದೆ ಬಸ್ಸಿನ ಒಳಗಡೆಯೇ ಸಜೀವ ದಹನವಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಬಸ್ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ : ಬೀದರ್​ ಕೃಷಿ ಇಲಾಖೆ ಅಧಿಕಾರಿ ಮೇಲೆ ‘ಲೋಕಾ’ ದಾಳಿ – ಇನ್ನೂ ಸಸ್ಪೆಂಡ್ ಆಗಿಲ್ಲ ಭ್ರಷ್ಟ ಅಧಿಕಾರಿ ಧೂಳಪ್ಪ!

Btv Kannada
Author: Btv Kannada

Read More