ಹುಬ್ಬಳ್ಳಿ : 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ಆರೋಪ – ಪೊಲೀಸ್​ ಠಾಣೆ ಮುಂದೆ ಭುಗಿಲೆದ್ದ ಕುಟುಂಬಸ್ಥರ ಆಕ್ರೋಶ!

ಹುಬ್ಬಳ್ಳಿ : ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಕುಡಿದ ಮತ್ತಿನಲ್ಲಿ ಆರೋಪಿ ಹೀನ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಅತ್ಯಾಚಾರಕ್ಕೆ ಯತ್ನಿಸಿದಾಗ ಮಗು ಚೀರಾಟ ನಡೆಸುತ್ತಿದ್ದಂತೆ ಪಾಪಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಇದೀಗ ಪೊಲೀಸ್ ಠಾಣೆ ಮುಂದೆ ಕುಟುಂಬಸ್ಥರು, ಸ್ಥಳೀಯರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 5 ವರ್ಷದ ಬಾಲಕಿಯ ಮೃತದೇಹ ಕಿಮ್ಸ್ ಆಸ್ಪತ್ರೆಯಲ್ಲಿದ್ದು,
ಡಿಸಿಪಿ ರವೀಶ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಎಸ್ಕೇಪ್​ ಆಗಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಕಮಿಷನರ್ ಶಶಿಕುಮಾರ್ ಅವರು ಆರೋಪಿ ಪತ್ತೆಗೆ 5 ತಂಡ ರಚಿಸಿದ್ದಾರೆ. ಡಿಸಿಪಿ ಹಾಗೂ ಎಸಿಪಿ ಐವರು ಇನ್ಸ್​ಪೆಕ್ಟರ್​ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ಈಗ ಹುಬ್ಬಳ್ಳಿ ಉತ್ತರ ವಲಯದಲ್ಲಿ ಸಂಪೂರ್ಣ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ಚಿತ್ರದುರ್ಗದಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಪ್ರೀ ವೆಡ್ಡಿಂಗ್ ಶೂಟ್ ಹುಚ್ಚಾಟ.. ಜಸ್ಟ್ ಮಿಸ್‌ ಆದ ಜೋಡಿ!

Btv Kannada
Author: Btv Kannada

Read More