ಮಾರ್ಕ್ ಸಿನಿಮಾದ ಕಾಳಿ ಸಾಂಗ್ ರಿಲೀಸ್ – ತ್ರಿಶೂಲ ಹಿಡಿದು ರುದ್ರಾವತಾರ ತಾಳಿದ ಕಿಚ್ಚ!

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ಚಿತ್ರದ ಕಾಳಿ ಸಾಂಗ್ ನಿನ್ನೆ ರಿಲೀಸ್ ಆಗಿದ್ದು, ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆದು ಹಾಡಿಗೆ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಈ ಗೀತೆಗಿದೆ. ಕಿಚ್ಚ ಕಾಳಿ ಹಾಡಿನಲ್ಲಿ ರುದ್ರಾವತಾರ ತಾಳಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರ ಮಾಡಲು ಹೊಸ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಸುದೀಪ್ ಜೊತೆಗೆ ಶೈನ್ ಟಾಮ್ ಚಾಕೊ, ಯೋಗಿ ಬಾಬು ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾಕ್ಕೆ ಕಿಚ್ಚ ಕ್ರಿಯೇಷನ್ ಮತ್ತು ಸತ್ಯಜ್ಯೋತಿ ಫಿಲಮ್ಸ್ ಬಂಡವಾಳ ಹೂಡಿದೆ. 

ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಪ್ರಿಯಾ ಸುದೀಪ್ ‘ಮಾರ್ಕ್’ ಸಿನಿಮಾವನ್ನು ವಿತರಣೆ ಮಾಡುವುದಕ್ಕೆ ಮುಂದಾಗಿದ್ದು, ಇವರೊಂದಿಗೆ ಕೆಆರ್‌ಜಿ ಸ್ಟುಡಿಯೋ ಕೈ ಜೋಡಿಸಿದೆ.

ಇದನ್ನೂ ಓದಿ : ಬುಲೆಟ್ ಬೈಕ್ ಹತ್ತಿದ ಕಮಿಷನರ್ ಸೀಮಂತ್ ಕುಮಾರ್ ಸಿಂಗ್..!

Btv Kannada
Author: Btv Kannada

Read More