ಚಿತ್ರದುರ್ಗದಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಪ್ರೀ ವೆಡ್ಡಿಂಗ್ ಶೂಟ್ ಹುಚ್ಚಾಟ.. ಜಸ್ಟ್ ಮಿಸ್‌ ಆದ ಜೋಡಿ!

ಚಿತ್ರದುರ್ಗ : ಇತ್ತೀಚೆಗೆ ಪ್ರೀ ವೆಡ್ಡಿಂಗ್​ ಫೋಟೋಶೂಟ್​ಗಾಗಿ ಜೋಡಿಗಳು ನಾನಾ ಬಗೆಯ ಕಸರತ್ತುಗಳನ್ನು ಮಾಡ್ತಾರೆ. ಎಲ್ಲಿ ನೋಡಿದರೂ ಬೇರೆ, ಬೇರೆ ಲೊಕೇಶನ್​ನಲ್ಲಿ, ಭಿನ್ನ ವಿಭಿನ್ನ ಥೀಮ್​ಗಳಲ್ಲಿ ನವ ಜೋಡಿಗಳು ಫೋಟೋಗೆ ಪೋಸ್​ ಕೊಟ್ಟು ಗಮನ ಸೆಳೆಯುತ್ತಾರೆ. ಆದರೆ ಇಲ್ಲೊಂದು ಜೋಡಿ ಯಾವುದೇ ಅನುಮತಿ ಪಡೆಯದೇ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿ ಫಜೀತಿಗೆ ಸಿಲುಕಿಕೊಂಡಿದೆ.

ಹೌದು, ಚಿತ್ರದುರ್ಗದ ಮದಕರಿಪುರ ಅಂಡರ್​ಪಾಸ್ ಬಳಿ ನೂತನ ಜೋಡಿಯೊಂದು ರೈಲ್ವೆ ಹಳಿ ಮೇಲೆ ಫ್ರೀ ವೆಡ್ಡಿಂಗ್ ಶೂಟ್ ಮಾಡಿಸಿದೆ. ಈ ಜೋಡಿ ಯಾವುದೇ ಅನುಮತಿ ಪಡೆಯದೇ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದರು.

ಆದ್ರೆ ಇದೇ ವೇಳೆ ಏಕಾಏಕಿ ರೈಲು ಬಂದಿದೆ. ​ಶೂಟ್​ಗೆಂದು ಹಳಿ ಮೇಲೆ ನಿಂತುಕೊಂಡಿದ್ದ ಐದು ಮಂದಿ ಕ್ಷಣ ಮಾತ್ರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಅಗ್ನಿ ಅವಘಡ – 40ಕ್ಕೂ ಹೆಚ್ಚು ಶೆಡ್​ಗಳು ಬೆಂಕಿಗಾಹುತಿ!

Btv Kannada
Author: Btv Kannada

Read More