ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರದ ಕಾನೂನು ಸುವ್ಯವಸ್ಥೆ ಪರಿಶೀಲಿಸಲು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಖುದ್ದು ಕಣಕ್ಕಿಳಿದಿದ್ದಾರೆ. ಐಷಾರಾಮಿ ಕಾರು ಬಿಟ್ಟು ಬುಲೆಟ್ ಏರಿದ ಕಮಿಷನರ್, ಐಪಿಎಸ್ ಅಧಿಕಾರಿಗಳ ತಂಡದೊಂದಿಗೆ ನಗರದಾದ್ಯಂತ ಸಂಚರಿಸಿ ಭದ್ರತಾ ವ್ಯವಸ್ಥೆಯನ್ನು ವೀಕ್ಷಿಸಿದರು.
ನಗರದ ಭದ್ರತೆ ಹಾಗೂ ಸಂಚಾರ ದಟ್ಟಣೆಯನ್ನು ಹತ್ತಿರದಿಂದ ವೀಕ್ಷಿಸಲು ಪೊಲೀಸ್ ಅಧಿಕಾರಿಗಳು ಬೈಕ್ ಮೂಲಕ ರೌಂಡ್ಸ್ ನಡೆಸಿದರು. ಟ್ರಿನಿಟಿ ಸರ್ಕಲ್‌ನಿಂದ ಆರಂಭವಾದ ಈ ರೈಡ್‌ನಲ್ಲಿ ಕಮಿಷನರ್ ಅವರಿಗೆ ಪಶ್ಚಿಮ ವಲಯ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಸಿಸಿಬಿ ಮುಖ್ಯಸ್ಥ ಅಜಯ್, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಸೇರಿದಂತೆ ಉತ್ತರ, ದಕ್ಷಿಣ ಹಾಗೂ ಸಂಚಾರ ವಿಭಾಗದ ಡಿಸಿಪಿಗಳು ಸಾಥ್ ನೀಡಿದರು.

ಟ್ರಿನಿಟಿ ಸರ್ಕಲ್ ನಿಂದ ಹೊರಟು ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು.
ಇದನ್ನೂ ಓದಿ : ಹುಬ್ಬಳ್ಳಿ ಮರ್ಯಾದಾ ಹತ್ಯೆ ಪ್ರಕರಣ – ಮತ್ತಿಬ್ಬರ ಬಂಧನ, ತನಿಖೆ ಚುರುಕುಗೊಳಿಸಿದ ಗ್ರಾಮೀಣ ಪೊಲೀಸರು!







