ಗಂಗಾವತಿ : ಹನುಮ ಜನ್ಮಸ್ಥಳ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಇಂದು ಹೈಡ್ರಾಮಾ ನಡೆದಿದೆ. ಪುಣ್ಯಕ್ಷೇತ್ರದಲ್ಲಿ ಇಬ್ಬರು ಶ್ರೀಗಳ ನಡುವಿನ ವಾಗ್ವಾದ ಭಕ್ತರ ಆತಂಕಕ್ಕೆ ಕಾರಣವಾಯಿತು.

ಅಂಜನಾದ್ರಿ ಬೆಟ್ಟದ ಪೂಜಾ ಕೈಕರ್ಯಗಳ ವಿಚಾರವಾಗಿ ಅರ್ಚಕ ವಿದ್ಯಾದಾಸ್ ಬಾಬಾ ಹಾಗೂ ಗೋವಿಂದಾನಂದ ಶ್ರೀ ನಡುವೆ ವಾಗ್ವಾದ ನಡೆದಿದೆ. ಪೂಜಾ ವಿಧಿವಿಧಾನಗಳ ಭಿನ್ನಾಭಿಪ್ರಾಯ ತಾರಕಕ್ಕೇರಿ, ಪರಸ್ಪರ ಹೊಡೆದಾಟದ ಹಂತಕ್ಕೆ ತಲುಪಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸಂಘರ್ಷದ ಹಾದಿ ಹಿಡಿದಿದ್ದ ಇಬ್ಬರು ಶ್ರೀಗಳನ್ನು ಸಮಾಧಾನಪಡಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ : ಬಳ್ಳಾರಿ-ಸಿರುಗುಪ್ಪ ಹೆದ್ದಾರಿಯಲ್ಲಿ ಕಾರು ಅಪಘಾತ – ಒಂದೇ ಕುಟುಂಬದ ಮೂವರು ಸಾವು!
Author: Btv Kannada
Post Views: 271







