ಸ್ಟಾರ್ ವಾರ್ ನಡುವೆ ’45’ ಅಬ್ಬರ – ಅಡ್ವಾನ್ಸ್ ಟಿಕೆಟ್​ ಬುಕ್ಕಿಂಗ್​ಗೆ ಭರ್ಜರಿ ರೆಸ್ಪಾನ್ಸ್​!

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ವಾರ್ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಮಧ್ಯೆ ’45’ ಸ್ಟಾರ್ಸ್ ಸೈಲೆಂಟ್ ಆಗಿ ಮುನ್ನುಗ್ಗುತ್ತಿದ್ದಾರೆ. ’45’ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು, ಈ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಈ ವಾರ್​ಗಳೆಲ್ಲ ಸೈಡ್​ಗೆ ಇರ್ಲಿ ಜನ ಥಿಯೇಟರ್​ಗೆ ಬಂದು ಸಿನಿಮಾ ನೋಡಿ ಅನ್ನೋ ಮೆಸೆಜ್​​ ಪಾಸ್ ಮಾಡಿದ್ದಾರೆ.

ಹೌದು.. ಡಿಸೆಂಬರ್​ 25ಕ್ಕೆ ವರ್ಲ್ಡ್​ ವೈಡ್​ ರಿಲೀಸ್ ಆಗೋ 45 ವರ್ಲ್ಡ್​ ನೋಡೋಕೆ ಒಂದು ದಿನ ಮೊದಲೇ ಬೇಡಿಕೆ ಹೆಚ್ಚಾಗಿದೆ. ಒಂದು ದಿನ ಮೊದಲೇ ಕರ್ನಾಟಕದಾದ್ಯಂತ 45 ಪೈಯ್ಡ್​ ಪ್ರೀಮಿಯರ್ ಶೋ ಹಾಕಲಾಗಿದ್ದು, ಎಲ್ಲಾ ಶೋಗಳ ಟಿಕೆಟ್​ಗಳು ಬುಕ್​ ಆಗಿವೆ. ಒಂದ್ ಕಡೆ ಪೈರೆಸಿ ಕಾಟ.. ಇದಕ್ಕಾಗೆ ಕಿಚ್ಚ ಯುದ್ಧಕ್ಕೆ ಸಿದ್ಧರಾಗಿ ಅಂದಿದ್ದಾರಂತೆ. ಆದ್ರೆ ಆ ಭಯ ಇಲ್ಲದೇ 45 ಸಿನಿಮಾ ಒಂದು ದಿನ ಮೊದಲೇ ಬೆಂಗಳೂರಿನ 30 ಕಡೆ ಪೈಯ್ಡ್ ಪ್ರೀಮಿಯರ್ ಶೋ ಹಾಕಿದ್ದಾರೆ. ಈ ಎಲ್ಲಾ ಪ್ರದರ್ಶನದ ಟಿಕೆಟ್​ಗಳು ಫುಲ್ ಆಗಿದೆ.

ಪ್ರೀಮಿಯರ್ ಶೋ ಟಿಕೆಟ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸಾಕಷ್ಟು ಶೋಗಳು ಶೋಗಳು ಹೌಸ್‌ಫುಲ್ ಆಗ್ತಿದೆ. ಕೆಲ ಶೋಗಳ ಟಿಕೆಟ್ ಸೋಲ್ಡೌಟ್ ಆಗೋಗಿದ್ದು, ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ’45’ ಸಿನಿಮಾ ಟಿಕೆಟ್ ಹಾಟ್ ಕೇಕ್ ರೀತಿ ಸೇಲ್ ಆಗಿದೆ. ಇನ್ನು ವೀಕೆಂಡ್​ನಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಲಿದೆ.

ಅಷ್ಟೆ ಅಲ್ಲ 45 ಸಿನಿಮಾ ಇರೋ ಎಲ್ಲಾ ಚಿತ್ರಮಂದಿರಗಳಲ್ಲಿ ಫಾಸ್ಟ್ ಫಿಲ್ಲಿಂಗ್ ಆಗ್ತಾ ಇದೆ. ‘45’ ಸಿನಿಮಾ ಡಿಸೆಂಬರ್ 24ರ ರಾತ್ರಿಯೇ ಶೋ ಪ್ರದರ್ಶನ ಮಾಡುತ್ತಿದೆ. ಡಿಸೆಂಬರ್ 24ರ ರಾತ್ರಿಯೇ ವಿಶೇಷ ಶೋ ಅನ್ನು ‘45’ ಚಿತ್ರತಂಡ ಆಯೋಜಿಸಿದ್ದು ರಾತ್ರಿ 7 ಗಂಟೆಗೆ ಕೆಲವೆಡೆ, 7:30ಕ್ಕೆ ಕೆಲವೆಡೆ ಶೋಗಳು ಪ್ರದರ್ಶನಗೊಳ್ಳಲಿವೆ. ಅಷ್ಟೆ ಅಲ್ಲ 45 ದೊಡ್ಡ ಕ್ಯಾನ್ವಸ್ ಸಿನಿಮಾ ಆಗಿದ್ರು ಟಿಕೆಟ್ ದರ ಕೂಡ ನಾಮರ್ಲ್​ ಆಗಿದೆ. 200 ರಿಂದ 250 ರೂಪಾಯಿಗೆ 45 ಟಿಕೆಟ್​ಗಳು ಸಿಗುತ್ತಿವೆ. ಅರ್ಜುನ್ ಜನ್ಯಾ ಕೈ ಚಳಕ ಜೋರಾಗೆ ಆಗಿದ್ದು, ಬಿಗ್​ ಬಜೆಟ್​ನಲ್ಲಿ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಬಾಕ್ಸ್​ ಆಫೀಸ್ ಉಡೀಸ್ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ : ನೆಲಮಂಗಲದ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಹಣ ವಸೂಲಿ – ವಿಡಿಯೋ ವೈರಲ್!

Btv Kannada
Author: Btv Kannada

Read More