ನೆಲಮಂಗಲದ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಹಣ ವಸೂಲಿ – ವಿಡಿಯೋ ವೈರಲ್!

ನೆಲಮಂಗಲ : ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ರೇಷನ್ ಕಾರ್ಡ್‌ಗೆ 20 ರೂ. ಹಣ ವಸೂಲಿ ಮಾಡಿರುವ ಘಟನೆ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಂಬದಕಲ್ಲು ಗ್ರಾಮದಲ್ಲಿ ನಡೆದಿದೆ.

ಪಡಿತರ ವಿತರಕ ಮುನಿಯಪ್ಪ ಸಾರ್ವಜನಿಕರಿಗೆ ನೇರ ಹಣದ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಬಡವರಿಗೆ ಪಡಿತರ ವಿತರಿಸಲು ವಿತರಕನ ನಿರಾಕರಣೆ ಮಾಡಿರುವ ಆರೋಪ ಕೇಳಿಬಂದಿದೆ.

ಸರ್ಕಾರದ ಉಚಿತ ಪಡಿತರ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವಿದ್ದು, ಭ್ರಷ್ಟ ವಿತರಕನ ಹಣ ಪಡೆಯುತ್ತಿರುವ ವಿಡಿಯೋ ವೈರಲ್​​ ಆಗಿದೆ. ಇದೀಗ ಭ್ರಷ್ಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಗಾಂಧಿಯವರನ್ನ ಕಾಂಗ್ರೆಸ್ ಒಂದಲ್ಲ ಹಲವಾರು ಬಾರಿ ಕೊಲೆ ಮಾಡಿದೆ – ಬಸವರಾಜ್ ಬೊಮ್ಮಾಯಿ ಕಿಡಿ!

Btv Kannada
Author: Btv Kannada

Read More