ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಕಿಚ್ಚ ಸುದೀಪ್-ದರ್ಶನ್ ಫ್ಯಾನ್ಸ್ ವಾರ್ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ನಾನು ಮಾತಿಗೂ ಬದ್ಧ.. ಯುದ್ಧಕ್ಕೂ ಸಿದ್ದ ಎಂದು ಕಿಚ್ಚ ಸುದೀಪ್ ಹೇಳಿದ್ದ ಮಾತು ಭಾರೀ ಚರ್ಚೆಗೆ ಕಾರಣವಾಗಿತ್ತು. ಸುದೀಪ್ ಹೇಳಿಕೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದಾವಣಗೆರೆಯಲ್ಲಿ ತಿರುಗೇಟು ಕೊಟ್ಟಿದ್ದಾರೆ ಎನ್ನಲಾಗಿದ್ದು, ಇದೀಗ ವಿವಾದ ಸೃಷ್ಟಿಸಲು ಯತ್ನಿಸಿದವ್ರಿಗೆ ಸ್ಪಷ್ಟನೆ ಕೊಟ್ಟು ಕಿಚ್ಚ ಸುದೀಪ್ ಮತ್ತೆ ವಾರ್ನ್ ಮಾಡಿದ್ದಾರೆ.
ನಾನು ಯಾರ ಹೆಸರೂ ತೆಗೆದಿಲ್ಲ, ಆದ್ರೂ ಯಾಕೆ ಮಾತಾಡ್ತಾರೆ ? ನನ್ನ ಸಿನಿಮಾದ ವಿರುದ್ಧ ಮಾತನಾಡುವವರ ವಿರುದ್ಧ ನನ್ನ ಹೋರಾಟ. ನಾನು ಪರ್ಸನಲ್ ಆಗಿ ಯಾರ ಬಗ್ಗೆಯೂ ಮಾತಾಡಿದ್ದೀನಾ, ಯಾರ ವಿಷಯನಾದ್ರೂ ನಾನು ಕೆದಕಿದ್ದೀನಾ ? ಆದ್ರೂ ಯಾಕೆ ರಿಯಾಕ್ಟ್ ಮಾಡಿದ್ರು ? ನಾನು ಮಾತನಾಡಿರೋ ಬಗ್ಗೆ ಇಡೀ ಇಂಡಸ್ಟಿಯಲ್ಲಿ ಅವರು ಒಬ್ಬರೇ ಯಾಕೆ ಮಾತಾಡಿದ್ರು? ಎಂದು ಸುದೀಪ್ ಪ್ರಶ್ನಿಸಿದ್ದಾರೆ.

ನನ್ನ ಹೇಳಿಕೆ ಬಗ್ಗೆ ಬೇರೆ ಯಾವ ನಟರೂ ಯಾಕೆ ಮಾತನಾಡಿಲ್ಲ? ವಿಜಯಲಕ್ಷ್ಮಿ ಅವರು ಯಾರ ಬಗ್ಗೆ ಹೇಳಿದ್ದಾರೆ ಅಂತಾ ಅವರೇ ಕ್ಲಾರಿಟಿ ಕೊಡ್ಲಿ ಎಂದಿದ್ದಾರೆ. ಫ್ಯಾನ್ಸ್ ವಾರ್ನಲ್ಲಿ ದರ್ಶನ್ ಪತ್ನಿ ಮತ್ತು ಕಿಚ್ಚ ಸುದೀಪ್ ನೇರ ಅಖಾಡಕ್ಕಿಳಿದಿದ್ದಾರೆ.
ಇದನ್ನೂ ಓದಿ : ಮತ್ತೆ ಪೊಲೀಸ್ ಇಲಾಖೆ ಮಾನ ತೆಗೆದ ಚಿಕ್ಕಜಾಲ PSI ಶಿವಣ್ಣ – 3 ಲಕ್ಷ ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತಕ್ಕೆ ಲಾಕ್!







