ಮತ್ತೆ ಪೊಲೀಸ್​​ ಇಲಾಖೆ ಮಾನ ತೆಗೆದ ಚಿಕ್ಕಜಾಲ PSI ಶಿವಣ್ಣ – 3 ಲಕ್ಷ ಲಂಚ ತೆಗೆದುಕೊಳ್ಳುವಾಗ ರೆಡ್​​ ಹ್ಯಾಂಡಾಗಿ ಲೋಕಾಯುಕ್ತಕ್ಕೆ ಲಾಕ್​!

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಿನೇ ದಿನೇ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಇದೀಗ ಚಿಕ್ಕಜಾಲ ಪೊಲೀಸ್​ ಸಬ್​​ಇನ್ಸ್​​ಪೆಕ್ಟರ್​​ ಭ್ರಷ್ಟಾಚಾರದ ಕರ್ಮಕಾಂಡ ಬಯಲಾಗಿದೆ. ಚಿಕ್ಕಜಾಲ ಸಬ್​​ಇನ್ಸ್​​ಪೆಕ್ಟರ್​ ಶಿವಣ್ಣ 420 ಕೇಸ್​​ ಬಿ-ರಿಪೋರ್ಟ್​​ಗೆ 3 ಲಕ್ಷ ಲಂಚ ಕೇಳಿದ್ದು, ರೌಡಿಶೀಟರ್​​ಗಳೇ ಈಗ ಪೊಲೀಸ್​ ಸಬ್​ಇನ್ಸ್​​ಪೆಕ್ಟರ್​ ವಿರುದ್ಧ ದೂರು ನೀಡುವ ದುರ್ಗತಿ ಬಂದಿದೆ.

PSI ಶಿವಣ್ಣ
       PSI ಶಿವಣ್ಣ

ರವಿಕುಮಾರ್ ಚಿಕ್ಕಜಾಲದಲ್ಲಿ 10 ವರ್ಷದಿಂದ ರೌಡಿಶೀಟರ್​ ಆಗಿದ್ದು, ಆತನ​ ಮೇಲಿನ 420 ಕೇಸ್​​ ಬಿ-ರಿಪೋರ್ಟ್​​ಗೆ ಚಿಕ್ಕಜಾಲ PSI 3 ಲಕ್ಷ ಡಿಮಾಂಡ್​ ಮಾಡಿದ್ದಾನೆ. ರೌಡಿಪಟ್ಟಿಯಿಂದ ಹೆಸರು ತೆಗೆಯುವಂತೆಯೂ ರವಿಕುಮಾರ್ ಸಬ್​​ಇನ್ಸ್​​ಪೆಕ್ಟರ್​​ಗೆ ಮನವಿ ಮಾಡಿದ್ದ. ರೌಡಿಶೀಟ್​ನಿಂದ ಕೈಬಿಡಬೇಕಾದ್ರೆ, 420 ಕೇಸ್​ ಬಿ-ರಿಪೋರ್ಟ್​​ಗೆ PSI 3 ಲಕ್ಷ ಲಂಚ ಕೇಳಿದ್ದು, ಇದೀಗ ಚಿಕ್ಕಜಾಲ ಸಬ್​​ಇನ್ಸ್​​ಪೆಕ್ಟರ್​ ಶಿವಣ್ಣ ವಿರುದ್ಧ ರೌಡಿಶೀಟರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾನೆ.

ರೌಡಿಶೀಟರ್​ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಚಿಕ್ಕಜಾಲ ಸಬ್​​ಇನ್ಸ್​​ಪೆಕ್ಟರ್​ಗೆ ಬಲೆ ಬೀಸಿದ್ದು, PSI ಶಿವಣ್ಣ, ರೌಡಿಶೀಟರ್​ ರವಿಕುಮಾರ್​ನಿಂದ ಹಣ ಪಡೆಯುತ್ತಿದ್ದಾಗಲೇ ರೆಡ್​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದಿದ್ದಾನೆ. ಚಿಕ್ಕಜಾಲ ಸಬ್​​ಇನ್ಸ್​​ಪೆಕ್ಟರ್​ ಶಿವಣ್ಣ ಕ್ಯಾಶ್​​ ಜೊತೆಗೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, PSI ಅನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ. ಗೃಹ ಸಚಿವರೇ, ರೌಡಿಶೀಟರ್​ನಿಂದ ಲಂಚ ಕೇಳಿದ ಸಬ್​​ಇನ್ಸ್​​ಪೆಕ್ಟರ್​ ಇಲಾಖೆಯಲ್ಲಿ ಇರಕೂಡದು. ಲೋಕಾಯುಕ್ತ ರಿಪೋರ್ಟ್​​ಗೆ ಕಾಯಬೇಡಿ PSI ಶಿವಣ್ಣನನ್ನು ಡಿಸ್ಮಿಸ್​ ಮಾಡಿ.

ಇದನ್ನೂ ಓದಿ : ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ – ಅಪಘಾತವೆಂದು ಬಿಂಬಿಸಿದ್ದ ಪತಿ ಅರೆಸ್ಟ್​!

Btv Kannada
Author: Btv Kannada

Read More