ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ – ಅಪಘಾತವೆಂದು ಬಿಂಬಿಸಿದ್ದ ಪತಿ ಅರೆಸ್ಟ್​!

ಬೆಂಗಳೂರು : ಪಾಪಿ ಪತಿಯೋರ್ವ ಸಿನಿಮಾ ಸ್ಟೈಲ್​ನಲ್ಲಿ​ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಗರದ ಬಾಗಲೂರಿನ ಮಿಟ್ಟಗಾನಹಳ್ಳಿ ಬಳಿ ನಡೆದಿದೆ. ಹೆಂಡತಿಯನ್ನು ಹತ್ಯೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ನಾಟಕವಾಡಿದ್ದ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗಾಯತ್ರಿ(50) ಮೃತ ಮಹಿಳೆ, ಅನಂತ್(64) ಕೊಲೆಗೈದ ಆರೊಪಿ.

ನಿನ್ನೆ ಸಂಜೆ ಅನಂತ್ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದು ಅಪಘಾತದ ರೀತಿ ಬಿಂಬಿಸಿದ್ದ. ನಂತರ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಶಿಪ್ಟ್ ಮಾಡಿ ನಾಟಕವಾಡಿದ್ದ. ಚಿಕ್ಕಜಾಲ ಟ್ರಾಫಿಕ್ ಸಬ್ ಇನ್ಸ್​ಪೆಕ್ಟರ್ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು, ಪರಿಶೀಲನೆ ವೇಳೆ ಕೊಲೆ ಅನ್ನೋದು ಬಯಲಾಗಿದೆ.

ದಂಪತಿ ಯಲಹಂಕದ ಬೊಮ್ಮಸಂದ್ರದ ಬಳಿ ವಾಸವಿದ್ದರು. ನಿನ್ನೆ ಸಂಜೆ ಮಿಟ್ಟಗಾನಹಳ್ಳಿ ಬಳಿಯ ಸೈಟ್ ನೋಡಲು ಗಂಡ, ಪತ್ನಿಯನ್ನು ಕರೆದೊಯ್ದಿದ್ದ. ಈ ವೇಳೆ ಸೈಟ್ ಬಳಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆಗೈದಿದ್ದಾನೆ. ಕೊಲೆ ಬಳಿಕ ಅಪಘಾತ ಅಂತ ಆಂಬುಲೆನ್ಸ್​ಗೆ ಫೋನ್ ಮಾಡಿ ಬಾಡಿ ಶಿಪ್ಟ್ ಮಾಡಿದ್ದಾನೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಪೊಲೀಸರು ಪತಿ ಅನಂತ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : TDP ಪಕ್ಷಕ್ಕೆ ಬೆಂಗಳೂರಿನ ಕಂಪನಿಗಳು ದೇಣಿಗೆ ಕೊಡುತ್ತಿರುವುದೇಕೆ?

Btv Kannada
Author: Btv Kannada

Read More