ಮತ್ತೆ ದರ್ಶನ್​​-ಸುದೀಪ್ ‘ಸ್ಟಾರ್’ ವಾರ್​ ಶುರು.. ಕಿಚ್ಚನಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಠಕ್ಕರ್!

ಬೆಂಗಳೂರು : ಸ್ಯಾಂಡಲ್​​ವುಡ್​​ನಲ್ಲಿ ಮತ್ತೆ ‘ಸ್ಟಾರ್’ ವಾರ್​ ಶುರುವಾಗಿದೆ. ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ​ ಯುದ್ಧ​ ಮತ್ತೆ ಮುನ್ನೆಲೆಗೆ ಬಂದಿದ್ದು, ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್​​ ಮತ್ತು ಸುದೀಪ್ ಬಹಿರಂಗವಾಗಿಯೇ ಅಖಾಡಕ್ಕಿಳಿದಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್​ ಇವೆಂಟ್‌ನಲ್ಲಿ ಕಿಚ್ಚ ಸುದೀಪ್ ವಿರೋಧಿಗಳ ವಿರುದ್ಧ ಸಮರ ಸಾರಿದ್ದಾರೆ. ಇಷ್ಟು ದಿನಗಳ ಕಾಲ ಇದ್ದ ಮುಸುಕಿನ ಗುದ್ದಾಟ ಕೊನೆಗೂ ರಿವೀಲ್ ಆಗಿದ್ದು,
ನೇರಾನೇರ ದರ್ಶನ್​ ಫ್ಯಾನ್ಸ್ ವಿರುದ್ಧ ಕಿಚ್ಚ ಸುದೀಪ್​ ‘ವಾಕ್​’ ಯುದ್ಧ ನಡೆಸಿದ್ದಾರೆ. ನಿಮಗೋಸ್ಕರ ಎಲ್ಲಾ ಮುಚ್ಕೊಂಡಿದ್ದೆ, ಯುದ್ಧಕ್ಕೆ ನಾವು ಈಗ ಸಿದ್ಧ. ನಾವು ಮಾತಿಗೂ ಬದ್ಧ.. ಯುದ್ಧಕ್ಕೂ ಸಿದ್ದ ಎಂದು ಸ್ಯಾಂಡಲ್​​ವುಡ್ ಬಾದ್ ಷಾ ಅಖಾಡಕ್ಕಿಳಿದಿದ್ದಾರೆ.

ಡಿಸೆಂಬರ್ 25ಕ್ಕೆ ಥಿಯೇಟರ್‌ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ, ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ. ಕೆಲವೊಮ್ಮೆ ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದೋ ಗೊತ್ತಿಲ್ಲ, ಕೆಲವೊಮ್ಮೆ ನಿಮಗೋಸ್ಕರ ಬಾಯಿ ಎಲ್ಲವನ್ನು ಮುಚ್ಚಿಕೊಂಡಿದ್ದೆ. ತಡೆಯುವಷ್ಟು ತಡೆಯಿರಿ. ಮಾತನಾಡುವ ಸಮಯದಲ್ಲಿ ಮಾತಾಡಿ, ಡಿ.25ಕ್ಕೆ ಪರದೆ ಮುಂದೆ ಕೂಗುವ ಕೂಗು ಬೆಂಗಳೂರಿನಲ್ಲಿ ಕೇಳಿಸಬೇಕು ಎಂದು ನಟ ದರ್ಶನ್​ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ನೇರ ಸವಾಲ್ ಹಾಕಿದ್ದಾರೆ. ಕಿಚ್ಚ ಸುದೀಪ್ ಅವರ ಈ ಮಾತು ಸ್ಯಾಂಡಲ್​​ವುಡ್​​ನಲ್ಲಿ ಸಂಚಲನ ಸೃಷ್ಟಿಸಿದೆ.

ನಟ ಸುದೀಪ್ ಹೇಳಿಕೆ ಬೆನ್ನಲ್ಲೇ ದರ್ಶನ್ & ಫ್ಯಾನ್ಸ್ ರೋಷಾವೇಷ ಹೆಚ್ಚಾಗಿದ್ದು, ಕಿಚ್ಚ ಸುದೀಪ್​ಗೆ ನಟ ದರ್ಶನ್​​ ಪತ್ನಿ ನೇರಾನೇರ ತಿರುಗೇಟು ಕೊಟ್ಟಿದ್ದಾರೆ. ದರ್ಶನ್‌ ಅವ್ರು ಇಲ್ಲದೇ ಇದ್ದಾಗ ಕೆಲವರು ಏನೇನೋ ಮಾತಾಡ್ತಾ ಇದ್ದಾರೆ, ವೇದಿಕೆ ಮೇಲೆ, ಕೆಲವು ಚಾನಲ್​ಗಳಲ್ಲಿ ಕುತ್ಕೊಂಡು ಮಾತಾಡ್ತಾರೆ. ದರ್ಶನ್​​ ಬಗ್ಗೆ, ಅವರ ಫ್ಯಾನ್ಸ್ ಬಗ್ಗೆ‌ ಏನೇನೋ ಮಾತಾಡ್ತಾ ಇರ್ತಾರೆ. ಅದೇ ಜನ ದರ್ಶನ್ ಇದ್ದಾಗ ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ, ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಬಾರದು ಎಂದು ಸುದೀಪ್​​ಗೆ ವಿಜಯಲಕ್ಷ್ಮಿ ಕೌಂಟರ್ ಕೊಟ್ಟಿದ್ದಾರೆ.

ಇದಕ್ಕೆಲ್ಲ ನಾವು ಕೋಪ ಮಾಡ್ಕೊಳ್ಳಲ್ಲ, ನೊಂದುಕೊಳ್ಳಲ್ಲ, ಬೇಜಾರ್ ಮಾಡ್ಕೊಳ್ಳಲ್ಲ. ದರ್ಶನ್ ಹೇಳಿದಂತೆ ಯಾರು ಕೂಡ ಕೋಪ ಮಾಡ್ಕೋಬೇಡಿ, ಬೇಜಾರ್ ಆಗಬೇಡಿ. ನಮಗೆ ಬೇಕಾಗಿರುವುದು ಪ್ರೀತಿ ಬೆಂಬಲ ಮಾತ್ರ. ಹೀಗಾಗಿ, ನೀವು ಕೋಪ ಮಾಡ್ಕೊಳ್ಬೇಡಿ ಎಂದು ಇನ್ ಡೈರೆಕ್ಟ್ ಆಗಿ ಕಿಚ್ಚ ಸುದೀಪ್​ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಠಕ್ಕರ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಡೆವಿಲ್​ಗೆ ಪೈರಸಿ ಕಾಟ.. 10,500ಕ್ಕೂ ಹೆಚ್ಚು ಲಿಂಕ್ ಡಿಲೀಟ್ – ಪೋಸ್ಟ್ ಹಂಚಿಕೊಂಡ ಚಿತ್ರತಂಡ!

Btv Kannada
Author: Btv Kannada

Read More