ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಬಿಡುಗಡೆಯಾಗಿ ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕಮ್ಮಿ ಆಗುತ್ತಲೇ ಇದ್ದು, ಮೊದಲ ವಾರ ಕೋಟಿಗಳಲ್ಲಿ ಕಲೆಕ್ಷನ್ ಮಾಡಿದ್ದ ಸಿನಿಮಾ ಈಗ ಅರ್ಧ ಕೋಟಿ ರೂ.ಗೂ ಕಮ್ಮಿ ಕಮಾಯಿ ಮಾಡ್ತಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಆಗಿರೋದರಿಂದ ಬಾಕ್ಸಾಫೀಸ್‌ನಲ್ಲಿ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋ ಕುತೂಹಲ ಸಿನಿ ಪ್ರಿಯರಲ್ಲಿತ್ತು.

ದರ್ಶನ್ ಫ್ಯಾನ್ಸ್ ದೊಡ್ಡಮಟ್ಟದಲ್ಲಿ ಸೆಲೆಬ್ರೇಷನ್ ಮಾಡಿ ಸಿನಿಮಾ ಬರಮಾಡಿಕೊಂಡಿದ್ದರು. ಅಭಿಮಾನಿಗಳು ಸಿನಿಮಾವನ್ನ ಗೆಲ್ಲಿಸುವ ಪಣತೊಟ್ಟಿದ್ದರು. ಆದ್ರೆ ಪೈರಸಿ ಕಾಟ ಡೆವಿಲ್ ಸಕ್ಸಸ್‌ಗೆ ಸ್ವಲ್ಪ ಪೆಟ್ಟುಕೊಟ್ಟಿದೆ. ಇಡೀ ಚಿತ್ರರಂಗಕ್ಕೆ ಈಗ ಪೈರಸಿ ದೊಡ್ಡ ಸವಾಲಾಗಿದ್ದು, ಸದ್ಯ ದರ್ಶನ್ ಫ್ಯಾನ್ಸ್ ಮತ್ತು ಕಿಚ್ಚ ಸುದೀಪ್ ನಡುವಿನ ಟಾಕ್ ವಾರ್ ಮಧ್ಯೆ ಡೆವಿಲ್ ಚಿತ್ರತಂಡ ಈ ಪೈರಸಿ ಕುರಿತು ಪೋಸ್ಟ್‌ವೊಂದನ್ನ ಹಂಚಿಕೊಂಡಿದೆ.

ಪೈರಸಿ ಇಂದು ವೈರಸ್‌ನಂತೆ ಹಬ್ಬುತ್ತಿದೆ. ಈವರೆಗೂ 10,500 ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನ ಡಿಲೀಟ್ ಮಾಡುವ ಕೆಲಸ ಆಗಿದೆ. ದಯವಿಟ್ಟು ಯಾರೂ ಪೈರಸಿ ಮಾಡಬೇಡಿ, ಸಿನಿಮಾವನ್ನ ಥಿಯೇಟರ್‌ನಲ್ಲೇ ನೋಡಿ ಅಂತ ಡೆವಿಲ್ ಚಿತ್ರತಂಡ ಮನವಿ ಮಾಡಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡಮಟ್ಟಿಗೆ ಪೈರಸಿ ಎದುರಾಗಿಲ್ಲ ಎಂದು ‘ಡೆವಿಲ್’ ಚಿತ್ರತಂಡ ಪೋಸ್ಟ್ ಮಾಡಿದೆ.
‘ಡೆವಿಲ್’ ನಿರೀಕ್ಷೆ ಮಾಡಿದಂತೆ ಮೊದಲ ದಿನ ಬಿಗ್ ಓಪನಿಂಗ್ ಪಡೆದುಕೊಂಡಿತ್ತು. ಮೊದಲ 4 ದಿನಗಳು ಸಿನಿಮಾದ ಕಲೆಕ್ಷನ್ ಕೋಟಿಗಳ ಲೆಕ್ಕದಲ್ಲಿಯೇ ಬಾಚಿಕೊಂಡಿತ್ತು. ಸಿನಿಮಾ 11ನೇ ದಿನ ಬಾಕ್ಸಾಫೀಸ್‌ನಲ್ಲಿ ದಿಢೀರ್ ಏರಿಕೆ ಕಂಡಿದೆ. 7ನೇ ದಿನದಿಂದ ಬಾಕ್ಸಾಫೀಸ್ ಕಲೆಕ್ಷನ್ ಲಕ್ಷಗಳಿಗೆ ಕುಸಿದಿತ್ತು. ಈಗ ಮತ್ತೆ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ : ಹಾಸ್ಟೆಲ್ ಊಟ ಸೇವಿಸಿ 14ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ.. ಆಸ್ಪತ್ರೆಗೆ ದಾಖಲು!







