ಮೈಸೂರು : ಮದುವೆ ಆಗುವುದಾಗಿ ನಂಬಿಸಿ ವಿವಾಹಿತ ಮಹಿಳೆಗೆ ಮೋಸ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ದಾವಣಗೆರೆ ಸಮೀಪ ಅರಸಾಪುರದ ಯುವಕ ಪರಶುರಾಮ್
ತಿ. ನರಸೀಪುರದ ಮಹಿಳೆಗೆ ವಂಚಿಸಿದ್ದಾನೆ.

ಮಹಿಳೆ ಜೊತೆ ಪರಶುರಾಮ್ 10 ತಿಂಗಳಿಂದ ಲಿವಿಂಗ್ ಟುಗೆದರ್ನಲ್ಲಿದ್ದು ಈಗ ಊರಿಗೆ ಪರಾರಿಯಾಗಿದ್ದಾನೆ. ಕೋಲಾರದಲ್ಲಿ ಉದ್ಯೋಗ ಮಾಡುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿದ್ದು,
ಬಳಿಕ ಯುವಕ ಲವ್ ಮಾಡುವುದಾಗಿ ಮಹಿಳೆಗೆ ನಂಬಿಕೆ ಹುಟ್ಟಿಸಿದ್ದ. ನಿನ್ನನ್ನೇ ಮದುವೆ ಆಗುವುದಾಗಿ ಸಂಸಾರ ಮಾಡಿ ಈಗ ದಿಢೀರ್ ನಾಪತ್ತೆಯಾಗಿದ್ದಾನೆ. ತಾಯಿಗೆ ಆರೋಗ್ಯ ಸರಿ ಇಲ್ಲವೆಂದು ಊರಿಗೆ ವಾಪಸ್ ಹೋಗಿ ಅಲ್ಲಿ ಮತ್ತೊಂದು ಯುವತಿ ಜೊತೆ ಮದುವೆಗೆ ತಯಾರಿ ನಡೆಸಿದ್ದಾನೆ.
ಯುವಕನ ಮನೆಗೆ ಹೋಗಿ ವಿಚಾರ ಮಾಡಿದ್ದಕ್ಕೆ ಮಹಿಳೆ ವಿರುದ್ದವೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಅನ್ಯಾಯಕ್ಕೊಳಗಾದ ಮಹಿಳೆಯ ದೂರು ಸ್ವೀಕರಿಸಿಲ್ಲ. ಯುವಕನ ಮೋಸದಿಂದ ಮಾನಸಿಕವಾಗಿ ನೊಂದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇಷ್ಟಾದರೂ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ದ ಇದೀಗ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ : ಆನೇಕಲ್ನಲ್ಲಿ ಸರಣಿ ಅಪಘಾತ – 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ!







