ಆನೇಕಲ್​ನಲ್ಲಿ ಸರಣಿ ಅಪಘಾತ – 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ!

ಆನೇಕಲ್ : ಕಂಟೇನರ್ ಲಾರಿಯಿಂದ ಸರಣಿ ಅಪಘಾತ ಸಂಭವಿಸಿ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿಯಾಗಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ.

ಆನೇಕಲ್ ಸಮೀಪದ ಬೆಸ್ತಮಾನಹಳ್ಳಿಯಿಂದ ಚಂದಾಪುರದವರೆಗೆ ಅಪಘಾತ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಿಕ್ಕ ಸಿಕ್ಕ ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದಿದ್ದು, 14 ಕಿ.ಮೀ ಪೊಲೀಸರು ಚೆಸ್ ಮಾಡಿದ್ರೂ ಚಾಲಕ ನಿಲ್ಲಿಸಿಲ್ಲ. ಹಾಗಾಗಿ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲು ತೂರಿದಾಗ ಚಾಲಕ ನಿಲ್ಲಿಸಿದ್ದು, ಕಂಟೈನರ್​ನಿಂದ ಚಾಲಕನನ್ನ ಹೊರ ಎಳೆದು ಸಾರ್ವಜನಿಕರು ಥಳಿಸಿದ್ದಾರೆ.

ಥಳಿಸುತ್ತಿದ್ದಾಗ ಮಧ್ಯೆ ಪ್ರವೇಶಿಸಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಡಿದ ನಶೆಯಲ್ಲಿ ಭೀಕರ ಸರಣಿ ಅಪಘಾತ ನಡೆಸಿರೋ ಶಂಕೆ ವ್ಯಕ್ತವಾಗಿದ್ದು, ಗಾಯಾಳುಗಳಿಗೆ  ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ : ಫ್ರೀಡಂ ಪಾರ್ಕ್​ಗೆ ಪ್ರತಿಭಟನೆ ಬಂದಿದ್ದ ಗ್ರಾ.ಪಂ ನೌಕರ ಹೃದಯಾಘಾತದಿಂದ ಸಾವು!

Btv Kannada
Author: Btv Kannada

Read More