ಬುದ್ಧಿಮಾಂದ್ಯ ಬಾಲಕನ ಮೇಲೆ ರಾಕ್ಷಸಿ ಕೃತ್ಯ ಕೇಸ್ – ನಾಲ್ವರ ವಿರುದ್ಧ FIR ದಾಖಲು!

ಬಾಗಲಕೋಟೆ : ಬುದ್ಧಿಮಾಂದ್ಯ ಬಾಲಕನ ಮೇಲೆ ರಾಕ್ಷಸಿ ಕೃತ್ಯ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಬಾಲಕನಿಗೆ ಚಿತ್ರಹಿಂಸೆ ನೀಡಿ ಜಾತಿ ನಿಂದನೆ ಮಾಡಿದ ಹಿನ್ನೆಲೆ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

ಅಕ್ಷಯ ಹಿಂದೂಲಕರ್, ರವಿಕಾಂತ, ಅಶೋಕ್​, ಅಕ್ಷಯ ಪತ್ನಿ ಆನಂದಿ ಹಿಂದೂಲಕರ್ ಮೇಲೆ FIR ದಾಖಲಾಗಿದೆ. ನವನಗರ ಠಾಣೆಯಲ್ಲಿ ಅಪರಾಧ ಪ್ರಕರಣ ಸಂಖ್ಯೆ 211/2025 ಅಡಿ ಭಾರತೀಯ ನ್ಯಾಯ ಸಂಹತೆ-2023 ಕಲಂ.115(2), 118(1), 118(2), 126(2), 351(2), 3(5), ಜೆ.ಜೆ.ಕಾಯ್ದೆ ಕಲಂ.75,82, ಆರ್.ಪಿ.ಡಬ್ಲೂ.ಡಿ ಕಾಯ್ದೆ ಕಲಂ.92(ಬಿ), ಎಸ್.ಸಿ/ಎಸ್.ಟಿ ಕಾಯ್ದೆ-2015 ಕಲಂ.3(1)(ಆರ್)(ಎಸ್),3(2)(vಎ) ಅಡಿ FIR ದಾಖಲಾಗಿದೆ.

ಬಾಗಲಕೋಟೆ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದು, ಕಳೆದ ಎರಡು ತಿಂಗಳುಗಳ ಹಿಂದೆ ನಡೆದ ಹಲ್ಲೆ ಪ್ರಕರಣ ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು!

Btv Kannada
Author: Btv Kannada

Read More