ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು!

ಹಾವೇರಿ : ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿಯ ಹಾನಗಲ್ ಪಟ್ಟಣದ ನಾಲ್ಕರ್ ಕ್ರಾಸ್ ಬಳಿ ನಡೆದಿದೆ. 28 ವರ್ಷದ ಗಂಗಾಧರ ಮೃತ ವ್ಯಕ್ತಿ.

ಮೃತ ಗಂಗಾಧರ ಹಾನಗಲ್​​ನ ಅಕ್ಕಿ ಆಲೂರು ಗ್ರಾಮದ ನಿವಾಸಿಯಾಗಿದ್ದು, ಹಾನಗಲ್ -ಶಿರಸಿ ಮಾರ್ಗದಲ್ಲಿ ರೋಡ್ ಕ್ರಾಸ್ ಮಾಡಿತ್ತಿದ್ದರು. ಈ ವೇಳೆ ಹಾನಗಲ್ -ಆನವಟ್ಟಿ ಮಾರ್ಗವಾಗಿ ತೆರಳ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹೊಸ ವರ್ಷದಿಂದ ಚಿಕ್ಕಣ್ಣ ನಟನೆಯ ‘ಜೋಡೆತ್ತು’ ಸಿನಿಮಾ ಶೂಟಿಂಗ್ ಶುರು!

Btv Kannada
Author: Btv Kannada

Read More