ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷೋತ್ತಮ ಬಿಳಿಮಲೆ ಅವರು ಡಾಕ್ಟರ್ ಡಿಸಿ ರಾಮಚಂದ್ರರವರ ಸಮೃದ್ಧ ಸಂಪದ ಮೌಲ್ಯಾಧಾರಿತ ಕಥೆಗಳ ಪುಸ್ತಕವನ್ನು ಅನಾವರಣಗೊಳಿಸಿದರು. ಈ ಕಾರ್ಯಕ್ರಮವನ್ನು ಸುಧಾ ವಾರಪತ್ರಿಕೆಯ ಮುಖ್ಯಸ್ಥೆ ಡಾ. ರಶ್ಮಿ ಎಸ್ ರವರು ಉದ್ಘಾಟನೆ ಮಾಡಿದ್ದು, ಮುಖ್ಯ ಅತಿಥಿಗಳಾಗಿ ನಿಡಸಾಲೆ ಪುಟ್ಟಸ್ವಾಮಯ್ಯನವರು ಭಾಗವಹಿಸಿದ್ದರು.

ಸಾಹಿತ್ಯ ಗುಡಿ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ನ ಕುವೆಂಪು ಸಭಾಂಗಣದಲ್ಲಿ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಮೃದ್ಧಿ ಪ್ರಕಾಶನದಿಂದ ಹೊರಬಂದ ಆರನೆಯ ಸಣ್ಣ ಕಥೆಗಳ ಪುಸ್ತಕವಾದ ಸಮೃದ್ಧ ಕಥೆಗಳು ಪುಸ್ತಕವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ್ ಬಿಳಿ ಮೇಲೆ ಬಿಡುಗಡೆಗೊಳಿಸಿ ನೈತಿಕ ಕಥೆಗಳ ಅನಿವಾರ್ಯತೆಯನ್ನು ತಿಳಿಸಿದರು.
ಸುಧಾ ವಾರಪತ್ರಿಕೆಯ ಸಂಪಾದಕಿ ರಶ್ಮಿ ಮಾತನಾಡಿ, ಡಿ.ಸಿ ರಾಮಚಂದ್ರ ಬರೆದಿರುವ ಎ ಐ ಯುಗದಲ್ಲೂ ಕಲ್ಪನಾ ಲೋಕವನ್ನು ಕಥೆಗಳು ಮತ್ತು ಪುಸ್ತಕಗಳು ಹೆಚ್ಚಿಸುವಲ್ಲಿ ಸಹಕಾರಿ ಎಂದರು. ನಂತರ ನೀಡಸಾಲೆ ಪುಟ್ಟಸ್ವಾಮಿ ಮಾತನಾಡುತ್ತಾ ಪುಸ್ತಕಗಳನ್ನು ಇಂದು ಹೊರ ತರುವುದು ಕಷ್ಟವಾಗುತ್ತಿದೆ ಇಂತಹ ಜಾಲತಾಣಗಳ ಹಾವಳಿ ಸಮಯದಲ್ಲಿಯೂ ಪುಸ್ತಕ ಬರೆಯುವರ ಪ್ರೋತ್ಸಾಹ ಹೆಚ್ಚಿನದಾಗಿ ಸರ್ಕಾರ ಮಾಡಬೇಕು ಎಂದು ತಿಳಿಸಿದರು.

ಕೃತಿಕಾರ ಡಾ.ರಾಮಚಂದ್ರ ಬರವಣಿಗೆ ಹವ್ಯಾಸ ಬಾಲ್ಯದಲ್ಲಿ ರೂಡಿಸಿಕೊಂಡಿದ್ದರಿಂದ ಪುಸ್ತಕ ಬರೆಯುವ ಕಾಯಕದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದೇನೆ ಪುಸ್ತಕಗಳನ್ನು ಓದಿದರಷ್ಟೇ ನಮಗೆ ಸಂತಸ ಆಗಲಿದೆ ಎಂದರು.
ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ. ನಂಜುಂಡಯ್ಯ ಮಾತನಾಡಿ, ಪುಸ್ತಕಗಳಿಗೆ ಬೆಲೆ ಇದೆ ಮೊಬೈಲ್ ನಲ್ಲಿ ನೋಡುವುದಕ್ಕಿಂತ ಪುಸ್ತಕಗಳನ್ನು ಹೆಚ್ಚು ಓದುವುದೇ ಸ್ವಾಭಾವಿಕ ಓದಿನ ಸತ್ವ ಎಂದರು.

ಡಾಕ್ಟರ್ ಡಿಸಿ ರಾಮಚಂದ್ರರವರು ಲೇಖಕರ ನುಡಿಗಳ ನಾಡಿದರೆ, ಡಾಕ್ಟರ್ ಸಿ ನಂಜುಂಡಯ್ಯನವರು ಅಧ್ಯಕ್ಷೀಯ ಭಾಷಣ ಮಾಡಿದರು. ಗಾಯಕಿ ಸಮಿತಾ ಮಲ್ನಾಡ್ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಪ್ರಾರ್ಥನೆ ನಡೆಸಿಕೊಟ್ಟರೆ, ಸಂಪನ್ಮೂಲ ಶಿಕ್ಷಕ ಡಿ.ಜಿ ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು, ಮಾಗಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತಿ.ನಾ ಪದ್ಮನಾಭ ಸ್ವಾಗತಿಸಿದರು, ಸಂಪನ್ಮೂಲ ವ್ಯಕ್ತಿ ಮುನಿಯಪ್ಪ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ವಿವಿಧ ಸಾಹಿತ್ಯ ಪ್ರೇಮಿಗಳು ಮತ್ತು ಅಧಿಕಾರಿಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : ಮಾಜಿ ಸಚಿವ ಕೆ.ಎನ್ ರಾಜಣ್ಣ ನಿವಾಸಕ್ಕೆ ಡಿಕೆಶಿ ಭೇಟಿ – ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ!







