ಕೃಷ್ಣಬೈರೇಗೌಡರ ಮೇಲೆ ವೈಯಕ್ತಿಕ ದ್ವೇಷ ಇಲ್ಲ.. ನನಗೂ ಪತ್ರಕ್ಕೂ ಯಾವುದೇ ಸಂಬಂಧವಿಲ್ಲ – ಶಾಸಕ SN ನಾರಾಯಣಸ್ವಾಮಿ ಸ್ಪಷ್ಟನೆ!

ಕೋಲಾರ : ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೋಲಾರ ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರಣ ಸಂಬಂಧ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬರೆದಿದ್ದ ಪತ್ರ ವೈರಲ್ ಆಗಿತ್ತು. ಇದೀಗ ಶಾಸಕ ಎಸ್.ಎನ್ ನಾರಾಯಣಸ್ವಾಮಿ ವೈರಲ್ ಆದ ಪತ್ರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಬಗ್ಗೆ ಬಂಗಾರಪೇಟೆಯಲ್ಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮಾತನಾಡಿ, ಅದು ನನ್ನ ಪತ್ರ ಅಲ್ಲ, ನನ್ನ ಸಹಿಯೂ ಅಲ್ಲ. ನನಗೂ ಪತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದೆ ಕಂದಾಯ ಇಲಾಖೆಯ ಕಾರ್ಯದರ್ಶಿ ವಿರುದ್ಧ ದೂರು ನೀಡಿದ್ದು ನಿಜ. ಆದ್ರೆ ನಾನು ಇದುವರೆಗೂ ಕಂದಾಯ ಸಚಿವರ ವಿರುದ್ಧ ಮಾತನಾಡಿಲ್ಲ ಎಂದಿದ್ದಾರೆ.

ನನ್ನ ಕೃಷ್ಣ ಬೈರೇಗೌಡರ ನಡುವೆ ಹುಳಿ ಹಿಂಡುವ ಕೆಲಸ ಆಗ್ತಿದೆ, ಅವರ ದಾಖಲೆ ಪಡೆಯುವ ಅಗತ್ಯ ನನಗಿಲ್ಲ. ನಾನು ಏನೂ ಅನ್ನೋದು ಕೃಷ್ಣಬೈರೇಗೌಡರಿಗೆ ಗೊತ್ತಿದೆ, ನನಗೂ ಕೃಷ್ಣಬೈರೇಗೌಡರಿಗೆ ವೈಯಕ್ತಿಕ ದ್ವೇಷ ಇಲ್ಲ. ನಾನು ಹಿಂದೆಯಿಂದ ಹೊಡೆಯುವ ರಾಜಕಾರಣಿ ಅಲ್ಲ, ಏನೇ ಇದ್ರು ನೇರವಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬುದ್ಧಿಮಾಂದ್ಯ ಬಾಲಕನ ಮೇಲೆ ರಾಕ್ಷಸಿ ಕೃತ್ಯ – ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆಗೈದ ಶಿಕ್ಷಕರು!

Btv Kannada
Author: Btv Kannada

Read More