ಬೆಂಗಳೂರು : ಕುಖ್ಯಾತ ರೌಡಿ ದಾಸನ ಜೊತೆ ಕೇಕ್ ಕಟ್ ಮಾಡಿದ PSI ನಾಗರಾಜ್ನನ್ನು ಸಸ್ಪೆಂಡ್ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿದ್ದು ರೌಡಿಗಳ ಎಂಜಲೆಲೆ ಎತ್ತೋ ಕೆಲಸಕ್ಕೆ ಹೋದ ಯಲಹಂಕ ಸಬ್ ಇನ್ಸ್ಪೆಕ್ಟರ್ ನಾಗರಾಜ @ ರೋಲ್ ಕಾಲ್ ನಾಗರಾಜಗೆ ಈಗ ಇಲಾಖೆ ಸರಿಯಾದ ಶಾಸ್ತಿ ಮಾಡಿದೆ. PSI ನಾಗರಾಜ್ನನ್ನು ಅಮಾನತ್ತು ಮಾಡಿ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.

PSI ರೋಲ್ ಕಾಲ್ ನಾಗರಾಜ ರೌಡಿಗಳ ಜೊತೆ ಸಂಪರ್ಕ ಇಟ್ಟಿಕೊಂಡಿದ್ದ. ಜುಟ್ ಬಿಟ್ಕೊಂಡಿರೋ ಖಾಲಿ ಪೋಲಿ ರೌಡಿಗಳಿಗೆ PSI ನಾಗರಾಜ್ ಸಾಥ್ ಕೊಡ್ತಿದ್ದ, ಇದೀಗ ರೌಡಿ ಬರ್ತಡೇಗೆ ತನ್ನ ಮನೆಯನ್ನೇ ಪಾರ್ಟಿ ಹಾಲ್ ಮಾಡ್ದಾ PSI ನಾಗರಾಜ್ ಸಸ್ಪೆಂಡ್ ಆಗಿದ್ದಾನೆ.

ಯಲಹಂಕ ನ್ಯೂಟೌನ್ ಠಾಣೆ PSI ನಾಗರಾಜ ರೌಡಿ ಮಂಜು @ ದಾಸನ ಬರ್ತಡೇಗೆ ಸ್ಪಾನ್ಸರ್ ಅಂತೆ. PSI ನಾಗರಾಜ ರೌಡಿ ಮಂಜನನ್ನ ಮನೆಗೆ ಕರ್ಸಿ ಹಾರ, ಕೇಕ್ ಕಟ್ ಮಾಡ್ಸಿದ್ದಾನೆ.
ಖಾಕಿ ಹಾಕಿದ್ಕೂಡ್ಲೇ ಜಾಕಿ ಆಗೋ PSI ನಾಗರಾಜ ಇದೀಗ ಯೂನಿಫಾರಂ ಬಿಚ್ಚಿ ಕೂತವ್ನೆ. ಬೆಂಗಳೂರು ಕಮಿಷನರ್ ಸೀಮಂತ್ ಸಾಹೇಬ್ರು PSI ನಾಗರಾಜನಿಗೆ ಸಸ್ಪೆಂಡ್ ರುಚಿ ತೋರ್ಸಿದ್ದಾರೆ. PSI ನಾಗರಾಜ ಸೋಶಿಯಲ್ ಮೀಡಿಯಾದಲ್ಲಿ ರೌಡಿಯೊಂದಿಗೆ ಜುಗಲ್ ಬಂದಿಯಾಗಿದ್ದ. ಲ್ಯಾಂಡ್ಲಿಟಿಗೇಷನ್ನು, ಕೇಸು ಕಾಸಿನಲ್ಲಿ ಕ್ಲೋಸು ಹೀಗೆ PSI ಹತ್ತಾರು ಆರೋಪ ಹೊತ್ಕಂಡಿದ್ದಾನೆ.

PSI ನಾಗರಾಜ, ರೌಡಿ ಮಂಜ @ ದಾಸನನ್ನ ಬಾಸು ಅಂತ ಕರೀತಿದ್ನಂತೆ. ಈ PSI ರೌಡಿ ದಾಸನನ್ನ ಹೆಗಲಮೇಲೆ ಕೂರಿಸ್ಕೊಂಡು ಮೆರೀತಿದ್ದ. ಇದೀಗ ಸಬ್ ಇನ್ಸ್ಪೆಕ್ಟರ್ ನಾಗರಾಜ @ ರೋಲ್ ಕಾಲ್ ನಾಗರಾಜನನ್ನು ಅಮಾನತ್ತು ಮಾಡಲಾಗಿದೆ.



ಇದನ್ನೂ ಓದಿ : ಮೈಸೂರಿನ ಕೆನರಾ ಬ್ಯಾಂಕಿನಲ್ಲೇ ಬಂಗಾರ ದೋಖಾ – ಬ್ಯಾಂಕ್ ವಿರುದ್ಧ ಗ್ರಾಹಕರಿಂದ ಪ್ರೊಟೆಸ್ಟ್.. ಚಿನ್ನ ವಾಪಾಸ್ಗೆ ಆಗ್ರಹ!







