ಮಂಡ್ಯ : ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಆತನ ಪುತ್ರ ದೌರ್ಜನ್ಯವೆಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಜಮೀನು ವಿಚಾರಕ್ಕೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ & ಪುತ್ರ ಶ್ರೀಕಾಂತ್ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಶ್ರೀನಿವಾಸ್ ಎಂಬುವವರ ಮೇಲೆ ಮಾಜಿ ಶಾಸಕ ಹಾಗೂ ಆತನ ಪುತ್ರ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಕೆ.ಬಿ.ಚಂದ್ರಶೇಖರ್ & ಪುತ್ರ ದಾಂಧಲೆ ನಡೆಸಿದ್ದು, ಶ್ರೀನಿವಾಸ್ ಕುಟುಂಬದ ಆಸ್ತಿ ತಮಗೆ ಸೇರಿದ್ದು ಎಂದು ಅಪ್ಪ-ಮಗ ಕಿರಿಕ್ ಮಾಡಿ, ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ತಮಗೆ ಸೇರಬೇಕೆಂದು ಮಾಜಿ ಶಾಸಕ ಹಾಗೂ ಆತನ ಪುತ್ರ ಜಗಳ ತೆಗೆದಿದ್ದಾರೆ.

1964ರಲ್ಲಿ ಶ್ರೀನಿವಾಸ್ ತಾತ ಕೃಷ್ಣಶೆಟ್ಟಿ ಅವರು ಚಂದ್ರಶೇಖರ್ ತಂದೆಗೆ 100 ರೂಪಾಯಿಗೆ 1.14 ಎಕರೆ ಜಮೀನು ಆಧಾರ ಮಾಡಿದ್ದಾರೆ ಎಂದು ವಾದ ಮಾಡಿದ್ದಾರೆ. ಈ ಜಮೀನು ನಮಗೆ ಸೇರಿದ್ದು ಎಂದು ಚಂದ್ರಶೇಖರ್ & ಶ್ರೀಕಾಂತ್ ಜಗಳ ತೆಗೆದಿದ್ದು, ಅಪ್ಪ-ಮಗನ ಆರೋಪಕ್ಕೆ ಶ್ರೀನಿವಾಸ್ ತಿರುಗೇಟು ಕೊಟ್ಟಿದ್ದಾರೆ. ನಿಮ್ಮ ಬಳಿ ಸೂಕ್ತ ದಾಖಲೆಗಳಿದ್ರೆ ಕಾನೂನಾತ್ಮಕವಾಗಿ ಈ ಜಮೀನು ಪಡೆಯಿರಿ ಎಂದು ಶ್ರೀನಿವಾಸ್ ಹೇಳಿದ್ದು, ಇದರಿಂದಿ ಕೋಪಗೊಂಡ ಚಂದ್ರಶೇಖರ್ & ಪುತ್ರ ಶ್ರೀನಿವಾಸ್ಗೆ ಅವಾಚ್ಯವಾಗಿ ನಿಂದಿಸಿ, ನಾವು ಜಮೀನು ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.

ಈ ಹಿಂದೆ ಶ್ರೀಕಾಂತ್ ಕೊಲೆ ಕೇಸಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಜೈಲು ವಾಸ ಅನುಭವಿಸಿದ್ರೂ ಬುದ್ದಿ ಕಲಿಯದೇ ಮಾಜಿ ಶಾಸಕನ ಮಗನ ದರ್ಪ ತೋರಿದ್ದಾರೆ. ಸದ್ಯ ಕೆ.ಆರ್.ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು ಪ್ರಕರಣ ದಾಖಲಾಗಿಲ್ಲ. ಹಲ್ಲೆ ಮಾಡಿದ ಚಂದ್ರಶೇಖರ್, ಶ್ರೀಕಾಂತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬೊಲೆರೋ – ಬಲ್ಕರ್ ವಾಹನಗಳ ನಡುವೆ ಭೀಕರ ಅಪಘಾತ – ಇಬ್ಬರು ಸಾವು!







