ಗುಟ್ಕಾ ವ್ಯಾಪಾರಿ ಕಿಡ್ನ್ಯಾಪ್‌ ಮಾಡಿ ರಾಬರಿ – 7 ಮಂದಿ ಆರೋಪಿಗಳು ಅರೆಸ್ಟ್!

ಬೆಂಗಳೂರು : ಮಾಜಿ ರೌಡಿಶೀಟರ್ & ಗ್ಯಾಂಗ್​ನಿಂದ ಕಿಡ್ನ್ಯಾಪ್ ಕಂ ರಾಬರಿ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗುಟ್ಕಾ, ಪಾನ್ ಮಸಾಲಾ ಸಾಗಿಸ್ತಿದ್ದ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ ಮಂಡ್ಯ ಭಾಗದಲ್ಲಿ ತಲೆಮರೆಸಿಕೊಂಡಿದ್ದ ಗ್ಯಾಂಗ್​ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾಜಶೇಖರ್
ರಾಜಶೇಖರ್

ಬೆಂಗಳೂರಿನ ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್​ನ ಪೈಪ್ ಲೈನ್ ಬಳಿ ರೌಡಿಶೀಟರ್ ಮಂಜು ಅಲಿಯಾಸ್ ಮಾಗಡಿ ಮಂಜು ಸಹಚರರು ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಸೋಮವಾರ ರಾತ್ರಿ 11.30ಕ್ಕೆ ಮುಕೇಶ್ ಭಾಯ್ ಕಾರಲ್ಲಿ 3.5 ಲಕ್ಷದ ಗುಟ್ಕಾ ತುಂಬಿಕೊಂಡು ಮನೆ ಕಡೆ ಹೊರಟಿದ್ದ. ಈ ವೇಳೆ ಸ್ವಿಫ್ಟ್ ಕಾರಿನಿಂದ ಮುಕೇಶ್ ಕಾರು ಅಡ್ಡಗಟ್ಟಿ ಗ್ಯಾಂಗ್ ಹಲ್ಲೆ ಮಾಡಿದೆ. ಶೆಲ್ ಪೆಟ್ರೋಲ್ ಬಂಕ್ ಬಳಿ ಕಾರು ನಿಲ್ಲಿಸಿ ಆರೋಪಿಗಳು 2 ಲಕ್ಷ ಹಣ ದರೋಡೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ.

ಸಂತೋಷ್
                              ಸಂತೋಷ್

ಇದೀಗ ಮಾಗಡಿ ಮಂಜು ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ದೇವರಾಜ್, ಚಂದ್ರು, ಸಂತೋಷ್, ರಾಜಶೇಖರ್, ರಾಜೇಶ್, ಚಂದನ್ ಬಂಧಿತರು. ರೌಡಿ ಚಂದನ್ ಮಾಸ್ಟರ್ ಪ್ಲ್ಯಾನ್​ನಂತೆ ಗ್ಯಾಂಗ್ ರಾಬರಿ ಮಾಡ್ತಿತ್ತು. ಈ ಹಿನ್ನೆಲೆ ಚಂದನ್ ಮೇಲೆ ರೌಡಿಶೀಟ್ ಓಪನ್ ಮಾಡಲು ಬ್ಯಾಡರಹಳ್ಳಿ ಪೊಲೀಸರು ಸಿದ್ಧತೆ ನಡೆಸ್ತಿದ್ದಾರೆ.

ಚಂದ್ರು
                                ಚಂದ್ರು

ಈ ಹಿಂದೆ ಹಲವು ರಾಬರಿಗಳಲ್ಲಿ ಗ್ಯಾಂಗ್ ಭಾಗಿಯಾಗಿದ್ದು, ಗ್ಯಾಸ್ ವೆಹಿಕಲ್ಸ್, ಅಕ್ಕಿ ವೆಹಿಕಲ್ಸ್ ಅಡ್ಡಗಟ್ಟಿ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ಮೊನ್ನೆ ಗ್ಯಾಂಗ್ ಪೀಣ್ಯ ಬಳಿ ಚೇತನ್ ಎಂಬುವವರ ರಾಬರಿ ಮಾಡಿತ್ತು. ಸದ್ಯ ಪೊಲೀಸರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.

ದೇವರಾಜ್
                                     ದೇವರಾಜ್

ಚಂದನ್
                                   ಚಂದನ್
ರಾಜೇಶ್
                  ರಾಜೇಶ್

ಇದನ್ನೂ ಓದಿ : ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಹೃದಯಘಾತದಿಂದ ಸಾವು!

Btv Kannada
Author: Btv Kannada

Read More