ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಹೃದಯಘಾತದಿಂದ ಸಾವು!

ಬೆಂಗಳೂರು : ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಬಿಎಂಟಿಸಿ ಬಸ್​ನಲ್ಲಿ ಕುಳಿತಿದ್ದ ದೊಡ್ಡಬೊಮ್ಮಯ್ಯ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಬೆಳಗಾವಿ ಅಧಿವೇಶನ ವರದಿಗೆ ಹೋಗಿದ್ದ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಅವರು ಅಧಿವೇಶನ ಮುಗಿದ ಹಿನ್ನಲೆ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಾಸ್ ಆಗಿದ್ದರು. ಮೆಜೆಸ್ಟಿಕ್​ಗೆ ಬಂದು ಬಿಎಂಟಿಸಿ ಬಸ್ ಮೂಲಕ ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ.

ದೊಡ್ಡಬೊಮ್ಮಯ್ಯ ಅವರು ಸಂಜೆವಾಣಿ, ದೂರದರ್ಶನ, ಆಕಾಶವಾಣಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ : ಆಟವಾಡ್ತಿದ್ದ ಬಾಲಕನಿಗೆ ಕಾಲಿಂದ ಒದ್ದ ಕೇಸ್ – ಆರೋಪಿ ರಂಜನ್‌ಗೆ ಮಾನಸಿಕ ಸಮಸ್ಯೆ? ಕುಟುಂಬಸ್ಥರಿಂದ ಪೊಲೀಸರಿಗೆ ಮಾಹಿತಿ!

Btv Kannada
Author: Btv Kannada

Read More