ಬೆಂಗಳೂರು : ತನ್ನ ಪಾಡಿಗೆ ತಾನು ಆಟವಾಡ್ತಿದ್ದ ಮಗುವಿನ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದ. ರಸ್ತೆ ಬಳಿ ಆಟ ಆಡ್ತಿದ್ದ ಬಾಲಕನಿಗೆ ರಂಜನ್ ಎಂಬಾತ ಇದ್ದಕ್ಕಿದ್ದಂತೆ ಕಾಲಿಂದ ಒದ್ದು ಅಮಾನವೀಯ ಕೃತ್ಯವೆಸಗಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಆರೋಪಿ ರಂಜನ್ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾನೆ ಎನ್ನಲಾಗುತ್ತಿದೆ.
ಆರೋಪಿ ರಂಜನ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಆರೋಪಿ ರಂಜನ್ ಕಳೆದ ಕೆಲವು ಸಮಯದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಕೆಲ ಕೆಲ ಮೆಡಿಕಲ್ ರಿಪೋರ್ಟ್ಗಳನ್ನು ಕುಟುಂಬಸ್ಥರು ಬನಶಂಕರಿ ಪೊಲೀಸರಿಗೆ ಕೊಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ ಹಾಗೂ ಆರೋಪಿಯ ಹಳೆಯ ನಡವಳಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಬನಶಂಕರಿ ಪೊಲೀಸರ ತಂಡವು ತಮಿಳುನಾಡಿನ ಮಧುರೈಗೆ ತೆರಳುತ್ತಿದೆ. ಅಲ್ಲಿ ರಂಜನ್ ಈ ಹಿಂದೆ ಯಾವ ರೀತಿಯ ಚಿಕಿತ್ಸೆ ಪಡೆದಿದ್ದ ಮತ್ತು ಆತನ ಹಿನ್ನೆಲೆ ಏನು ಎಂಬುದನ್ನು ಪೊಲೀಸರು ಪತ್ತೆಹಚ್ಚಲಿದ್ದಾರೆ.
ಇದನ್ನೂ ಓದಿ : ಯಾವುದೇ ಕ್ಷಣದಲ್ಲಿ ಭೈರತಿ ಬಸವರಾಜ್ ಅರೆಸ್ಟ್ – ಶಾಸಕನ ಬಂಧನಕ್ಕೆ CID ವಿಶೇಷ ತಂಡ ರಚನೆ!







