ಪ್ರೀತಿಯ ನಾಯಿಗೆ ಸೀಮಂತ ಶಾಸ್ತ್ರ – 50 ಕೆಜಿ ಬಿರಿಯಾನಿ ಊಟ ಹಾಕಿ ಸಂಭ್ರಮಿಸಿದ ತಿಪಟೂರು ಯುವಕರು!

ತಿಪಟೂರು ತಾಲೂಕು ದಸರಿಘಟ್ಟದ ಗ್ರಾಮದ ಯುವಕರು ಕೆಲವು ದಿನಗಳ ಹಿಂದೆ ಸಿಕ್ಕಂತ ಹೆಣ್ಣು ನಾಯಿಮರಿಗೆ ಇಂದು ಸೀಮಂತ ಕಾರ್ಯ ನೆರವೇರಿಸಿದ ಘಟನೆ ನೆಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಾರಿ ವೈರಲ್ ಆಗಿರುವ ಘಟನೆ ನಡೆದಿದೆ.

ಪ್ರವೀಣ್ ಎಂಬ ವ್ಯಕ್ತಿಗೆ ಕಳೆದ ಎರಡು ತಿಂಗಳಗಳ ಹಿಂದೆ ಈ ನಾಯಿ ಸಿಕ್ಕಿದ್ದು, ಈಗ ಈ ನಾಯಿ ಗರ್ಭಿಣಿಯಾಗಿದ್ದು ಇದಕ್ಕೆ ಊರಿನ ಗ್ರಾಮಸ್ಥರು ಸೀಮಂತ ಕಾರ್ಯವನ್ನು ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಂದಂತಹ ಗ್ರಾಮಸ್ಥರಿಗೆ 50 ಕೆಜಿ ಬಿರಿಯಾನಿ ಊಟ ವಿತರಣೆ ಮಾಡಿದ್ದಾರೆ.

ತರ್ಲೆ ಬಾಯ್ಸ್ ಎಂಬ ಯುವಕರ ಗುಂಪೊಂದು ಈ ಕಾರ್ಯಕ್ರಮವನ್ನು ನೆರವೇರಿಸಿದ್ದು ವಿಶೇಷವಾಗಿದೆ, ಅಷ್ಟೇ ಅಲ್ಲದೆ ಸೀಮಂತ ಕಾರ್ಯಕ್ಕೆ ತಮ್ಮದೇ ಆದ ಫ್ಲೆಕ್ಸ್ ಮೂಲಕ ಶುಭ ಕೋರಿರುವುದು ವಿಶೇಷವಾಗಿತ್ತು, ನಾಯಿಯ ಭಾವಚಿತ್ರ ಹಾಗೂ ಶುಭಕೋರುವವರ ಚಿತ್ರಗಳು ಕೂಡ ಫ್ಲೆಕ್ಸ್ ನಲ್ಲಿರುವುದು ನೋಡಬಹುದಾಗಿದೆ.

ಇದನ್ನೂ ಓದಿ : ರಾಜಕಾಲುವೆ ನುಂಗಿ ನಿರ್ಮಿಸಿದ್ದ 39 ಐಷಾರಾಮಿ ರೋ ಹೌಸ್‌ಗಳ ತೆರವಿಗೆ ಆದೇಶ – ಬಿಲ್ಡರ್‌ಗೆ ಸಂಕಷ್ಟ!

Btv Kannada
Author: Btv Kannada

Read More