ರಾಜಕಾಲುವೆ ನುಂಗಿ ನಿರ್ಮಿಸಿದ್ದ 39 ಐಷಾರಾಮಿ ರೋ ಹೌಸ್‌ಗಳ ತೆರವಿಗೆ ಆದೇಶ – ಬಿಲ್ಡರ್‌ಗೆ ಸಂಕಷ್ಟ!

ಬೆಂಗಳೂರು : ಬೆಂಗಳೂರಿನ ಕೆ.ಆರ್. ಪುರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ 39 ಐಷಾರಾಮಿ ರೋ ಹೌಸ್‌ಗಳನ್ನು ನೆಲಸಮಗೊಳಿಸಲು GBA ಜಂಟಿ ಆಯುಕ್ತರು ಖಡಕ್ ಆದೇಶ ನೀಡಿದ್ದಾರೆ.

ಕೆ.ಆರ್. ಪುರದ ಸರ್ವೇ ನಂಬರ್ 11/1 ರಿಂದ 11/5ರ ವರೆಗಿನ 2 ಎಕರೆ 10 ಗುಂಟೆ ಜಾಗದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ 39 ಐಷಾರಾಮಿ ರೋ ಹೌಸ್‌ಗಳನ್ನು ನಿರ್ಮಿಸಲಾಗಿತ್ತು. ದೂರಿನ ಅನ್ವಯ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿ ಡಾ. ಸುಧಾ ಪೈ, ರಾಜಕಾಲುವೆ ಮುಚ್ಚಿರುವುದು ಮತ್ತು ನಕ್ಷೆ ನಿಯಮಗಳ ಉಲ್ಲಂಘನೆಯನ್ನು ಖಚಿತಪಡಿಸಿದರು.

ಕಟ್ಟಡಗಳ ನೆಲಸಮದ ಜೊತೆಗೆ, ರಾಜಕಾಲುವೆ ಮುಚ್ಚಿ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಮೋಸ ಎಸಗಿದ ಬಿಲ್ಡರ್ ವಿರುದ್ಧ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಯುವತಿ ಸಾವು, ಮೂವರಿಗೆ ಗಂಭೀರ ಗಾಯ!

Btv Kannada
Author: Btv Kannada

Read More