ಬೆಂಗಳೂರು : ತನ್ನ ಪಾಡಿಗೆ ತಾನು ಆಟವಾಡ್ತಿದ್ದ ಮಗುವಿನ ಮೇಲೆ ದುರುಳನೋರ್ವ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆ ಬಳಿ ಆಟ ಆಡ್ತಿದ್ದ ಬಾಲಕನಿಗೆ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಕಾಲಿಂದ ಒದ್ದು ಅಮಾನವೀಯ ಕೃತ್ಯವೆಸಗಿದ್ದಾನೆ.

ಡಿ.14 ರಂದು ರಂಜನ್ ಎಂಬಾತ ಈ ಅಮಾನುಷ ಕೃತ್ಯವೆಸಗಿದ್ದಾನೆ. ಅಜ್ಜಿ ಮನೆಗೆ ಆಗಮಿಸಿದ್ದ ನೀವ್ ಜೈನ್ ಎಂಬ ಬಾಲಕನ ಮೇಲೆ ಹಲ್ಲೆಗೈದಿದ್ದಾನೆ. ತನ್ನ ಪಾಡಿಗೆ ಆಟವಾಡ್ತಿದ್ದ ಬಾಲಕನನ್ನು ರಂಜನ್ ಫುಟ್ಬಾಲ್ ರೀತಿ ಒದ್ದಿದ್ದು, ದುಷ್ಟ ರಂಜನ್ ಒದ್ದಿದ್ದರಿಂದ ಬಾಲಕನ ಮೈಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ರಂಜನ್ ನೀಚ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೀಗೆಯೇ ರಂಜನ್ ಹಲವರಿಗೆ ಹೊಡೆದು, ಬೈಯೋದು ಮಾಡ್ತಾನಂತೆ. ಬಾಲಕನ ತಾಯಿ ಆರೋಪಿ ರಂಜನ್ ವಿರುದ್ಧ ದೂರು ದಾಖಲಿಸಿದ್ದು, ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಜಾಮೀನಿನ ಮೇಲೆ ರಂಜನ್ನನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ : ಉಡುಪಿ : ಕಾಪುನಗರ ಯೋಜನಾ ಪ್ರಾಧಿಕಾರಕ್ಕೆ ಲೋಕಾಯುಕ್ತ ದಾಳಿ!







