ಉಡುಪಿ : ಕಾಪುನಗರ ಯೋಜನಾ ಪ್ರಾಧಿಕಾರಕ್ಕೆ ಲೋಕಾಯುಕ್ತ ದಾಳಿ!

ಉಡುಪಿ : ಕಾಪುನಗರ ಯೋಜನಾ ಪ್ರಾಧಿಕಾರಕ್ಕೆ ಲೋಕಾ ಶಾಕ್​ ಕೊಟ್ಟಿದೆ. ಸಾರ್ವಜನಿಕ ಹಿತಾಸಕ್ತಿಯ ಫೈಲ್​ಗಳು ವಿಲೇವಾರಿ ಆಗದ ಹಿನ್ನೆಲೆ ಯೋಜನಾ ಪ್ರಾಧಿಕಾರಕ್ಕೆ ಉಡುಪಿ ಜಿಲ್ಲಾ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.

ಸಾರ್ವಜನಿಕರ ದೂರು ಹಿನ್ನೆಲೆ ಕಾಪು ಪುರಸಭಾ ಕಟ್ಟಡದಲ್ಲಿರುವ ನಗರ ಯೋಜನಾ ಪ್ರಾಧಿಕಾರಕ್ಕೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಡಿವೈಎಸ್ಪಿ ಹಾಲಮೂರ್ತಿ ರಾವ್, ಇನ್ಸ್​​ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಲೋಕಾ ಟೀಂ ದಾಳಿ ನಡೆಸಿದೆ.

ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಕಡತಗಳನ್ನು ಪರಿಶೀಲನೆ ನಡೆಸಿದ್ದು, ಇದರಲ್ಲಿ ಸಾಕಷ್ಟು ಸಮಯಗಳಿಂದ ವಿಲೇವಾರಿ ಆಗದೆ ಬಾಕಿ ಉಳಿದಿರುವ ಹಲವು ಕಡತಗಳು ಕಂಡುಬಂದಿವೆ.

ಇದನ್ನೂ ಓದಿ : “ರಕ್ಕಿ” ಸಿನಿಮಾದ ಫಸ್ಟ್ ಡ್ರಾಪ್ ಸ್ಟೈಲಿಷ್ ಆಗಿ ಬಿಡುಗಡೆ!

Btv Kannada
Author: Btv Kannada

Read More