ನಾಲ್ಕನೇ ಮಹಡಿಯಿಂದ ಬಿದ್ದ ಸಿಮೆಂಟ್ ಇಟ್ಟಿಗೆ – 4 ವರ್ಷದ ಮಗು ಸಾವು!

ಬೆಂಗಳೂರು : ಬೆಂಗಳೂರಿನ ಹೆಚ್ ಎ ಎಲ್ ಚಿನ್ನಪ್ಪನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಫ್ಲೋರ್ ನಿಂದ ಸಿಮೆಂಟ್ ಇಟ್ಟಿಗೆಗಳು ಬಿದ್ದು, ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ.

ಸುಬ್ಬಾರಾವ್ ಎಂಬುವವರಿಗೆ ಸೇರಿದ ಈ ಕಟ್ಟಡದ ಪಕ್ಕದಲ್ಲಿದ್ದ ಶೀಟ್ ಮನೆಯ ಮೇಲೆ ಐದಾರು ಸಿಮೆಂಟ್ ಇಟ್ಟಿಗೆಗಳು ಬಿದ್ದಿವೆ. ಮೇಲ್ಛಾವಣಿ ಸೀಳಿ ಒಳಬಿದ್ದ ರಭಸಕ್ಕೆ ನಾಲ್ಕು ವರ್ಷದ ಮನಸ್ವಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಕಣ್ಣೆದುರೇ ಮಗು ಬಲಿಯಾದದ್ದನ್ನು ಕಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್.ಎ.ಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಟ್ಟಡ ಮಾಲೀಕ ವಿರುದ್ದ ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ : ಪತ್ನಿಯ ಹತ್ಯೆಗೆ ಪತಿಯಿಂದಲೇ ಸುಫಾರಿ – ಇಬ್ಬರು ಆರೋಪಿಗಳು ಸೇರಿ ಪತಿ ಮಹೇಶ್ ಅರೆಸ್ಟ್!

Btv Kannada
Author: Btv Kannada

Read More