ಬೆಳಗಾವಿ : ವಿಧಾನಸಭೆಯಲ್ಲಿ ದ್ವೇಷ ಭಾಷಣ ತಡೆ ವಿಧೇಯಕ ಮಂಡನೆ ವೇಳೆ ಸಚಿವ ಭೈರತಿ ಸುರೇಶ್ ಮತ್ತು ಬಿಜೆಪಿ ಶಾಸಕರ ನಡುವೆ ತೀವ್ರ ವಾಕ್ಸಮರ ನಡೆಯಿತು. ವಿರೋಧ ಪಕ್ಷಗಳ ಗದ್ದಲದ ನಡುವೆಯೇ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.
ವಿಧೇಯಕದ ಚರ್ಚೆ ವೇಳೆ, ಕರಾವಳಿಯಲ್ಲಿ ಬೆಂಕಿ ಹಾಕಿ ಈಗ ಇಲ್ಲಿಗೆ ಬಂದಿದ್ದೀರಾ ಎಂದು ವಿಪಕ್ಷಗಳ ವಿರುದ್ಧ ಸಚಿವ ಭೈರತಿ ಸುರೇಶ್ ಕಿಡಿ ಕಾರಿದರು. ಈ ಹೇಳಿಕೆ ಕರಾವಳಿ ಭಾಗದ ಬಿಜೆಪಿ ಶಾಸಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಸಚಿವರ ಮಾತಿಗೆ ಶಾಸಕ ಚೆನ್ನಬಸಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ವಾಕ್ಸಮರ ನಡೆಯಿತು. ಈ ವೇಳೆ ಭೈರತಿ ಸುರೇಶ್, ‘ಏಯ್ ನೀನ್ಯಾವನೋ ನನಗೆ ಹೇಳೋಕೆ?’ ಎಂದು ಏಕವಚನದಲ್ಲಿ ಗುಡುಗಿದ್ದು ಸದನದ ಸಂಘರ್ಷಕ್ಕೆ ಕಾರಣವಾಯಿತು.
ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಮಾತನಾಡಲು ಅವಕಾಶ ಸಿಗದಿದ್ದಾಗ ಸದನದಲ್ಲಿ ಗದ್ದಲ ಉಂಟಾಯಿತು. ಅಶೋಕ್ ಅವರಿಗಾಗಿ ಕಾಯದೆ ಬಿಜೆಪಿ, ಜೆಡಿಎಸ್ ಸದಸ್ಯರು ಹಾಗೂ ಶಾಸಕ ಯತ್ನಾಳ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ವಿಪಕ್ಷಗಳ ತೀವ್ರ ವಿರೋಧ ಮತ್ತು ಗದ್ದಲದ ನಡುವೆಯೇ ಸರ್ಕಾರ ‘ದ್ವೇಷ ಭಾಷಣ ತಡೆ ವಿಧೇಯಕ’ಕ್ಕೆ ಸದನದ ಅಂಗೀಕಾರ ಪಡೆದುಕೊಂಡಿತು.ವಿಪಕ್ಷ ನಾಯಕರಿಗೂ ಮಾತನಾಡಲು ಅವಕಾಶ ನೀಡದ ಸರ್ಕಾರದ ಕ್ರಮಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಸರ್ಕಾರ ದ್ವೇಷ ಭಾಷಣ ತಡೆ ವಿಧೇಯಕಕ್ಕೆ ಅಂಗೀಕಾರ ಪಡೆಯಿತು. ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ಸರ್ಕಾರದ ಕ್ರಮಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಇನ್ಸ್ಪೆಕ್ಟರ್ಗೆ ಮಹಿಳೆಯಿಂದ ಪ್ರೀತಿಸುವಂತೆ ಪೀಡಿಸಿದ ಕೇಸ್ – ಆರೋಪಿ ವನಜಾ ಮೇಲಿದೆ ಸಾಲು ಸಾಲು ಪ್ರಕರಣ!







