ಬೆಂಗಳೂರು : 21 ಎಕರೆ ಸರ್ಕಾರಿ ಕೆರೆ ಮತ್ತು ಸ್ಮಶಾನ ಜಮೀನು ಒತ್ತುವರಿ ಪ್ರಕರಣ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಾಜೀನಾಮೆ ಸಲ್ಲಿಸುವಂತೆ ‘ಕೇಸರಿ’ ಪಡೆ ಆಗ್ರಹಿಸಿದೆ. ಬಿಜೆಪಿ ನಾಯಕರು ಕೋಲಾರದಲ್ಲಿರುವ 21 ಎಕರೆ ಜಮೀನಿನ ದಾಖಲೆ ಬಿಡುಗಡೆ ಮಾಡಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಕೃಷ್ಣ ಬೈರೇಗೌಡರ ರಾಜೀನಾಮೆಗೆ ಬಿಜೆಪಿ ನಾಯಕರು ಒತ್ತಡ ಹಾಕುತ್ತಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಧಿಕಾರ ದುರ್ಬಳಕೆ ಮಾಡಿ ನರಸಾಪುರ ಹೋಬಳಿ ಗರುಡನಪಾಳ್ಯದಲ್ಲಿರುವ 21.16 ಎಕರೆ ಸರ್ಕಾರಿ ಜಮೀನು ಕಬಳಿಸಿರುವ ಆರೋಪ ಕೇಳಿಬಂದಿದೆ. ಮೂಲತಃ ಕೆರೆ & ಸ್ಮಶಾನದ ಜಮೀನು ಇದೀಗ ಕೃಷ್ಣ ಬೈರೇಗೌಡರ ಹೆಸರಲ್ಲಿದ್ದು, ಈ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಳಗಾವಿಯಲ್ಲಿ ಬಿಜೆಪಿ ನಾಯಕರು ದಾಖಲೆ ಬಿಡುಗಡೆ ಮಾಡಿದ್ದಾರೆ.

ಅಧಿವೇಶನದ ಹೊತ್ತಲ್ಲೇ ಸಚಿವ ಕೃಷ್ಣ ಬೈರೇಗೌಡ ಭೂ ಕಬಳಿಕೆಯ ದಾಖಲೆ ರಿಲೀಸ್ ಮಾಡಿದ್ದು, ಭೂ ಕಬಳಿಕೆಯ ದಾಖಲೆ ಬಿಡುಗಡೆ ಮಾಡ್ತಿದ್ದಂತೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಕೃಷ್ಣ ಬೈರೇಗೌಡ ವಿರುದ್ಧ ಸರ್ವೆ ನಂ. 46, ಸರ್ವೆ ನಂಬರ್ 47ರಲ್ಲಿರುವ 21 ಎಕರೆ ಸರ್ಕಾರಿ ಜಮೀನು ಕಬಳಿಕೆ ಆರೋಪ ಕೇಳಿಬಂದ ಹಿನ್ನೆಲೆ MLC ಛಲವಾದಿ ನಾರಾಯಣಸ್ವಾಮಿ ಸೇರಿ ಹಲವು ಬಿಜೆಪಿ ನಾಯಕರು ಕೋಲಾರದಲ್ಲಿ ನಿನ್ನೆಯಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸ್ತಿದ್ದಾರೆ.

ಸಚಿವ ಸ್ಥಾನಕ್ಕೆ ಕೃಷ್ಣ ಬೈರೇಗೌಡ ರಾಜೀನಾಮೆ ನೀಡೋವರೆಗೂ ಬಿಜೆಪಿ ಪ್ರೊಟೆಸ್ಟ್ ಮಾಡುತ್ತಿದ್ದು, 21 ಎಕರೆ ಸರ್ಕಾರಿ ಜಮೀನು ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಭೂ ಕಬಳಿಕೆ ಆರೋಪ ಬೆನ್ನಲ್ಲೇ ಸ್ವಪಕ್ಷ ಕಾಂಗ್ರೆಸ್ನಲ್ಲೂ ರಾಜೀನಾಮೆ ಒತ್ತಡ ಹೆಚ್ಚಾಗಿದ್ದು, ಕಾಂಗ್ರೆಸ್ ನಾಯಕರು ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಆಂತರಿಕವಾಗಿಯೂ ಸಿಡಿದೆದ್ದಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ರಾಜೀನಾಮೆ ಕೊಡಬೇಕೆಂದು ಕೆಲ ಕಾಂಗ್ರೆಸ್ಸಿಗರು ಕೂಡ ಆಗ್ರಹಿಸಿದ್ದಾರೆ. ಭೂ ಕಬಳಿಕೆ ಪ್ರಕರಣದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ವರದಿ ಕೇಳಿದ್ದು,
ಇಂದು ರಾತ್ರಿಯೇ ಕೃಷ್ಣ ಬೈರೇಗೌಡ ಭೂ ಕಬಳಿಕೆ ವರದಿ ಹೈಕಮಾಂಡ್ ಕೈ ಸೇರಲಿದೆ. ಕೃಷ್ಣ ಬೈರೇಗೌಡ ರಾಜೀನಾಮೆ ಕೊಡುವವರೆಗೂ ‘ಕೇಸರಿ’ ಪಡೆ ಅಹೋರಾತ್ರಿ ಧರಣಿ ನಡೆಸಲಿದ್ದು,
ಕೃಷ್ಣ ಬೈರೇಗೌಡ ರಾಜೀನಾಮೆ ಕೊಡುವವರೆಗೂ ಹೋರಾಟ ನಡೆಸಲು ಬಿಜೆಪಿ ನಿರ್ಧಾರ ಮಾಡಿದೆ.


ಇದನ್ನೂ ಓದಿ : ಕಲೆಕ್ಷನ್ ಕಿಂಗ್ ಅಂದ್ರೆ ಅದು ಬಿ.ವೈ ವಿಜಯೇಂದ್ರ – ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್!







