ಬೆಂಗಳೂರು : ಭೀಕರ ಅಪಘಾತದಲ್ಲಿ ಹೈಕೋರ್ಟ್ ವಕೀಲ ರಾಮಚಂದ್ರ ರೆಡ್ಡಿ ಸಾವನ್ನಪ್ಪಿರುವ ಘಟನೆ ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆ ದಾಟುತ್ತಿದ್ದ ಹೈಕೋರ್ಟ್ ವಕೀಲ ರಾಮಚಂದ್ರ ರೆಡ್ಡಿ ಅವರಿಗೆ ಸುಧೀರ್ ಎಂಬುವವರು ಚಲಾಯಿಸುತ್ತಿದ್ದ ಬ್ಲಾಕ್ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಾಮಚಂದ್ರ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ 7:30ರ ಸುಮಾರಿಗೆ ಸಂಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಕಾರು ರಾಮಚಂದ್ರ ರೆಡ್ಡಿಗೆ ಗುದ್ದಿದ ಬಳಿಕ ಬೇರೆ ಬೇರೆ ವಾಹನಗಳಿಗೂ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಸಂಜಯನಗರ ಸಂಚಾರಿ ಪೊಲೀಸರು FIR ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಚಾಲಕ ಸುಧೀರ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ : ಕಲೆಕ್ಷನ್ ಕಿಂಗ್ ಅಂದ್ರೆ ಅದು ಬಿ.ವೈ ವಿಜಯೇಂದ್ರ – ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್!







