ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯದ ಖಜಾನೆಯನ್ನು ಲೂಟಿ ಮಾಡಿ ಕಾಂಗ್ರೆಸ್ ತನ್ನ ಹೈಕಮಾಂಡ್ ಪಕ್ಷವನ್ನ ತೃಪ್ತಿಪಡಿಸುವ ಕೆಲಸ ಮಾಡ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ವಿಜಯೇಂದ್ರ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.

ಕಲೆಕ್ಷನ್ ಕಿಂಗ್ ಅಂದ್ರೆ ಅದು ಬಿ.ವೈ ವಿಜಯೇಂದ್ರ. ಅವರ ಕಲೆಕ್ಷನ್, ಅಕೌಂಟ್ಗಳು, ಟ್ರಾನ್ಸಪರ್ ಬಿಚ್ಚಿ ಇಡ್ಬೇಕಾ? ವಿಜಯೇಂದ್ರ ಅವರನಪ್ಪನ ಹೆಸರು ಕೆಡಸಿದ್ದಾನೆ, ಅವರ ಅಪ್ಪನ ಹೆಸರನ್ನು ಇಳಿಸೋಕೆ ವಿಜಯೇಂದ್ರ ಕಾರಣ. ವಿಜಯೇಂದ್ರನಿಗೆ ಯಾವುದೇ ಅನುಭವ ಇಲ್ಲ, ಯಾವ ಖಜಾನೆ ಖಾಲಿಯಾಗಿದೆ ಬಂದು ಮಾತನಾಡೋಕೆ ಹೇಳಿ ಎಂದು ಡಿಸಿಎಂ ಡಿಕೆಶಿ ಕಿಡಿ ಕಾರಿದ್ದಾರೆ.
ಎಲ್ಲೋ ತಪ್ಪಿಸಿಕೊಂಡು ಮಾತನಾಡೋದಲ್ಲಾ, ಸದನಕ್ಕೆ ಬಂದು ಪ್ರಶ್ನೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ – ಕೋಲಾರ ತಾಲೂಕು ಕಚೇರಿಯಲ್ಲಿ ಕಾವಲಿಗೆ ಕುಳಿತ BJP ಕಾರ್ಯಕರ್ತರು!







