ನೆಲಮಂಗಲ : ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರನೊಬ್ಬ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲದ ಸುಭಾಷ್ ನಗರದ ಬಜಾಜ್ ಶೋ ರೂಂ ಬಳಿ ನಡೆದಿದೆ. ಇಸ್ಲಾಂಪುರ ನಿವಾಸಿ ತಬ್ರೇಜ್ ಗಾಯಗೊಂಡ ಬೈಕ್ ಸವಾರ.

ತಬ್ರೇಜ್ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ. ತಬ್ರೇಜ್ಗೆ ಗಂಭೀರ ಗಾಯವಾಗಿದ್ದು, ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೈಪ್ ಲೈನ್ ಕಾಮಗಾರಿಗಾಗಿ ಗುಂಡಿಗಳನ್ನು ತೆಗೆಯಲಾಗಿತ್ತು. ಆದರೆ ಕಾಮಗಾರಿ ಮುಗಿದ ನಂತರ ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಇದೀಗ ತಬ್ರೇಜ್ ಸಾವು – ಬದುಕಿನ ನಡುವೆ ಹೋರಾಟ ಮಾಡ್ತಿದ್ದು, ಬೈಕ್ ಸವಾರ ಗುಂಡಿ ತಪ್ಪಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಗರ್ಲ್ ಫ್ರೆಂಡ್ ಜೊತೆ ಕುಡಿದು ಶ್ರೀಮಂತರ ಪುತ್ರನಿಂದ ಆ್ಯಕ್ಸಿಡೆಂಟ್ – ಪಾದಚಾರಿ ಸಾವು.. FIR ದಾಖಲು!







