ನೆಲಮಂಗಲ ಹೆಡ್ ಕಾನ್ಸ್​ಟೇಬಲ್‌ನಿಂದ 25 ಕೋಟಿ ಮೌಲ್ಯದ ಭೂ ಕಬಳಿಕೆ – HC ಗಿರಿಜೇಶ್ & ಗ್ಯಾಂಗ್ ವಿರುದ್ಧ ಕ್ರಮ ಯಾವಾಗ?

ನೆಲಮಂಗಲ : ಪೊಲೀಸ್ ಇಲಾಖೆಯಲ್ಲಿದ್ದುಕೊಂಡೇ ನೆಲಮಂಗಲ ಠಾಣೆ ಹೆಡ್ ಕಾನ್ಸ್​ಟೇಬಲ್ ಗಿರಿಜೇಶ್ ಕೋಟ್ಯಾಂತರ ಮೌಲ್ಯದ ಜಮೀನು ಕಬಳಿಸಿದ್ದ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 25 ಕೋಟಿ ಮೌಲ್ಯದ ಜಮೀನು ಕಬಳಿಸಿದ್ದ ಹೆಡ್ ಕಾನ್ಸ್​ಟೇಬಲ್ ಗಿರಿಜೇಶ್ ವಿರುದ್ಧ ಈಗಾಗಲೇ FIR ಕೂಡ ದಾಖಲಾಗಿದೆ. ಆದರೆ FIR ದಾಖಲಾಗಿ 10 ದಿನವಾದ್ರು ಹೆಡ್ ಕಾನ್ಸ್​ಟೇಬಲ್ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಪೊಲೀಸ್ ಕಾನ್ಸ್‌ಟೇಬಲ್ ಕೆಲಸಕ್ಕೂ ಹಾಜರಾಗುತ್ತಿಲ್ಲ, ಇತ್ತ ಪೊಲೀಸರು ಆತನನ್ನು ಪತ್ತೆಯೂ ಮಾಡುತ್ತಿಲ್ಲ. ನೆಲಮಂಗಲ ಸಬ್ ರಿಜಿಸ್ಟ್ರಾರ್ D.P ಸತೀಶ್ ಕುಮಾರ್ ಜೊತೆ ಸೇರಿ ಥ್ಯಾಂಪಿ ಮ್ಯಾಥ್ಯೂ ಎಂಬಾತನ ನೆಲಮಂಗಲ ತಾಲೂಕಿನ ಮಾಚನಹಳ್ಳಿಯಲ್ಲಿರುವ 8 ಎಕರೆ ಭೂಮಿಯನ್ನು ಗಿರಿಜೇಶ್ ಅಕ್ರಮವಾಗಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾನೆ. FIR ದಾಖಲಾದಾಗಿನಿಂದ ಆರೋಪಿಗಳು ಎಸ್ಕೇಪ್ ಆಗಿದ್ದು, ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇದೀಗ ಡಾಬಸ್ ಪೇಟೆ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ಜನಸಾಮಾನ್ಯರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಪೊಲೀಸ್ ಇಲಾಖೆ ಈಗ ತಮ್ಮದೇ ಇಲಾಖೆ ಅಧಿಕಾರಿ ಬಂಧನಕ್ಕೆ ಯಾಕೆ ಮೀನಾಮೇಷ ಎನಿಸುತ್ತಿದೆ. ಜನಸಾಮಾನ್ಯರಿಗೆ ಒಂದು ಕಾನೂನು ಪೊಲೀಸರಿಗೆ ಒಂದು ಕಾನೂನಾ? ಎಂಬ ಪ್ರಶ್ನೆ ಎದ್ದಿದೆ.

ಹೆಡ್ ಕಾನ್ಸ್​ಟೇಬಲ್ ಗಿರಿಜೇಶ್ ನಕಲಿ ದಾಖಲೆಗಳನ್ನು ಸೃಷ್ಟಿಸಿ 25 ಕೋಟಿ ಮೌಲ್ಯದ ಭೂಮಿ ಪರಭಾರೆ ಮಾಡಿಕೊಂಡಿದ್ದು, ಈ ಹಿಂದೆ ಗಿರಿಜೇಶ್ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹೆಡ್ ಕಾನ್ಸ್​ಟೇಬಲ್ ಗಿರಿಜೇಶ್ ವಿರುದ್ಧ ಹಲವು ಕೇಸ್​ಗಳು ದಾಖಲಾಗಿದ್ದವು. ಸಸ್ಪೆಂಡ್ ಆಗಿ ಮನೆಯಲ್ಲಿದ್ದರೂ ಬುದ್ಧಿ ಕಲಿಯದೇ ಮತ್ತೆ ಮತ್ತೆ ಅದೇ ಕೆಲಸವನ್ನು ಮುಂದುವರೆಸಿದ್ದಾನೆ. ಗೃಹ ಸಚಿವರೇ ಹೆಡ್ ಕಾನ್ಸ್​ಟೇಬಲ್ ಗಿರಿಜೇಶ್ ವಿರುದ್ಧ ಕ್ರಮ ಯಾವಾಗ? ಪೊಲೀಸ್ ಇಲಾಖೆಗೆ ಕಳಂಕ ತರುವ ಭ್ರಷ್ಟ ಅಧಿಕಾರಿಗಳನ್ನು ಅರೆಸ್ಟ್ ಮಾಡಿ.

ಇದನ್ನೂ ಓದಿ : ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಾಧನೆ ಮತ್ತು ಕೊಡುಗೆಗಾಗಿ ಭಾರತ ರತ್ನ ಪ್ರಶಸ್ತಿ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿಸಿದ ಅದ್ದೂರಿ ಕಾರ್ಯಕ್ರಮ!

Btv Kannada
Author: Btv Kannada

Read More