ಬೆಳ್ತಂಗಡಿ : ಬೆಳ್ತಂಗಡಿಯ ‘ಪಾರಿಸ್ ಪೃಥ್ವಿ ಜುವೆಲ್ಸ್’ ಮಳಿಗೆಯ ಹಿಂಭಾಗದಲ್ಲಿ ಮೊಬೈಲ್ ಆಡುತ್ತಿದ್ದ ಮೂವರು ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಮಳಿಗೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ್ದು. ಡಿ.15ರ ಸೋಮವಾರ ಸಂತೆಗೆ ಬಂದಿದ್ದ ವೇಣೂರು ಮೂಲದ ಈ ವಿದ್ಯಾರ್ಥಿಗಳು ಮಳಿಗೆಯ ಹಿಂಭಾಗ ಕುಳಿತಿದ್ದಾಗ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಕ್ಕಳ ಹೆಸರನ್ನು ಕೇಳಿ ಅವರು ಮುಸ್ಲಿಂ ಎಂದು ತಿಳಿದ ಮ್ಯಾನೇಜರ್ ಅಶೋಕ್ ಬಂಗೇರ ಹಾಗೂ ಸಿಬ್ಬಂದಿ, ಧರ್ಮದ ಹೆಸರಿನಲ್ಲಿ ನಿಂದಿಸಿ ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ಬಂದ ಪೋಷಕರೊಂದಿಗೂ ಸಿಬ್ಬಂದಿ ಉದ್ಧಟತನದಿಂದ ವರ್ತಿಸಿ ವಾಗ್ವಾದ ನಡೆಸಿದ್ದಾರೆ.

ಹಲ್ಲೆಗೊಳಗಾದ ಮೂವರು ವಿದ್ಯಾರ್ಥಿಗಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಿಎನ್‌ಎಸ್ (BNS) ಸೆಕ್ಷನ್ 126(2) ಮತ್ತು 115(1) ರ ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
SDPI ಮುಖಂಡ ಅಕ್ಬರ್ ಬೆಳ್ತಂಗಡಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದರು. ಕೇವಲ ಧರ್ಮದ ಕಾರಣಕ್ಕೆ ಅಪ್ರಾಪ್ತ ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ : ಕೊಚ್ಚಿಯಲ್ಲಿ ವೃಷಭ ಚಿತ್ರದ ಅದ್ದೂರಿ ಟ್ರೇಲರ್ ರಿಲೀಸ್ – ತಂದೆ – ಮಗ ಸಾಹಸಗಾಥೆಯೊಂದಿಗೆ ಬಂದ ಮೋಹನ್ ಲಾಲ್!







