ಹಾಸ್ಟೆಲ್‌ನಲ್ಲಿ ಬಿ.ಕಾಂ ವಿದ್ಯಾರ್ಥಿನಿ ಹಠಾತ್ ಸಾವು – 22ರ ಹರೆಯದಲ್ಲೇ ಹೃದಯಾಘಾತಕ್ಕೆ ಬಲಿಯಾದ ಯುವತಿ!

ಶೃಂಗೇರಿ : ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿನಿ, ತೀರ್ಥಹಳ್ಳಿ ಮೂಲದ ದಿಶಾ (22) ಇಂದು ಹಾಸ್ಟೆಲ್‌ನಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶೃಂಗೇರಿಯ ಬಿಸಿಎಂ ಹಾಸ್ಟೆಲ್‌ನಲ್ಲಿದ್ದ ದಿಶಾ ಅವರಿಗೆ ಇಂದು ಬೆಳಿಗ್ಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ

ಪದವಿ ಅಂತಿಮ ವರ್ಷದಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ದಿಶಾ ನಿಧನಕ್ಕೆ ಜೆಸಿಬಿಎಂ ಕಾಲೇಜಿನ ಶಿಕ್ಷಕರು ಹಾಗೂ ಸಹಪಾಠಿಗಳು ಕಂಬನಿ ಮಿಡಿದಿದ್ದಾರೆ. 22ರ ಹರೆಯದಲ್ಲೇ ಯುವತಿ ಅಕಾಲಿಕ ಸಾವನ್ನಪ್ಪಿರುವುದು ತೀರ್ಥಹಳ್ಳಿ ಹಾಗೂ ಶೃಂಗೇರಿ ಭಾಗದ ಜನರಲ್ಲಿ ಆತಂಕ ಮತ್ತು ಶೋಕ ಮೂಡಿಸಿದೆ.

ಇದನ್ನೂ ಓದಿ : ಹೆಂಡತಿ, ಅತ್ತೆ-ಮಾವನಿಗೆ ಮನಬಂದಂತೆ ಹಲ್ಲೆಗೈದ ಪಾಪಿ ಪತಿ – FIR ದಾಖಲು!

Btv Kannada
Author: Btv Kannada

Read More