ನಾನು ಕಾಣೆ ಆಗಿಲ್ಲ, 23 ಕಂತು ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡಿದ್ದೇವೆ – ವಿಪಕ್ಷಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್!

ಬೆಂಗಳೂರು : ನಾನು ಎಲ್ಲೂ ಕಾಣೆಯಾಗಿಲ್ಲ, ಸದನಕ್ಕೆ ಹೋಗುತ್ತಿದ್ದೇನೆ. ಏನೇ ಚರ್ಚೆಯಿದ್ದರೂ ಅಲ್ಲಿಯೇ ಆಗಲಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿಗೆ ತಿರುಗೇಟು ನೀಡಿದರು. ಗೃಹಲಕ್ಷ್ಮಿ ಹಣ ಬಿಡುಗಡೆ ವಿಳಂಬ ಹಾಗೂ ತಮ್ಮ ಅನುಪಸ್ಥಿತಿಯ ಕುರಿತಾದ ಟೀಕೆಗಳಿಗೆ ಅವರು ಇಂದು ಸ್ಪಷ್ಟನೆ ನೀಡಿದರು.

ಗೃಹಲಕ್ಷ್ಮಿಯ 23 ಕಂತುಗಳನ್ನು ಈಗಾಗಲೇ ಜಮೆ ಮಾಡಿದ್ದೇವೆ. ಬಾಕಿ ಹಣ ಹಾಗೂ ಯೋಜನೆಯ ಪ್ರಗತಿಯ ಬಗ್ಗೆ ಸದನದಲ್ಲೇ ಸಂಪೂರ್ಣ ಉತ್ತರ ನೀಡುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು.

ನಾನು ಕಾಣೆಯಾಗಿಲ್ಲ, ಏನೂ ಆಗಿಲ್ಲ. ಯಾರು ಈ ರೀತಿ ಹೇಳುತ್ತಿದ್ದಾರೆ?” ಎಂದು ಪ್ರಶ್ನಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಹೇಳಿದ ಮಾತು ತಪ್ಪಲು ಇದು ಬಿಜೆಪಿಯಲ್ಲ, ಕಾಂಗ್ರೆಸ್ ಸರ್ಕಾರ ಎಂದು ತಿರುಗೇಟು ನೀಡಿದರು. ಅಲ್ಲದೆ, ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಸದನದಲ್ಲೇ ಉತ್ತರಿಸುವುದಾಗಿ ಸವಾಲು ಹಾಕಿದರು.

ಇದನ್ನೂ ಓದಿ : ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ಮೇಲೆ IT ದಾಳಿ!

Btv Kannada
Author: Btv Kannada

Read More