ಬೆಂಗಳೂರು : ಹೆಣ್ಣು ಕೊಟ್ಟ ಅತ್ತೆ-ಮಾವನ ಮೇಲೆಯೇ ಅಳಿಯ ದೌರ್ಜನ್ಯವೆಸಗಿರುವ ಘಟನೆ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯ ಚನ್ನಸಂದ್ರ ಬಳಿ ನಡೆದಿದೆ. ಸುರೇಶ್ ನಾಯ್ಡು ಎಂಬಾತ ಮಗು ಮುಂದೆಯೇ ಪತ್ನಿ, ಅತ್ತೆ ಮಾವನಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ನಡು ರಸ್ತೆಯಲ್ಲಿ ಹೆಂಡತಿ, ಅತ್ತೆ-ಮಾವನನ್ನು ಅಟ್ಟಾಡಿಸಿ ಹೊಡೆದಿದ್ದಾನೆ. ಅಷ್ಟೇ ಅಲ್ಲದೆ ಸುರೇಶ್ ನಾಯ್ಡು ಮಾವನಿಗೆ ಸ್ಟ್ರೋಕ್ ಹೊಡೆದು ಅಂಗವಿಕಲರಾದ್ರೂ ಬಿಡದೇ ಹಲ್ಲೆಗೈದಿದ್ದಾನೆ.

ಕೆಲ ವರ್ಷಗಳ ಹಿಂದೆ ಸುರೇಶ್ ನಾಯ್ಡು, ಜೋಶಿತಾಳನ್ನು ಮದುವೆಯಾಗಿದ್ದ. ಸುರೇಶ್ ನಾಯ್ಡು ಅಖಿಲಾ ಭಾರತ ಜನಸೇವ ಸಮಿತಿ ಎಂಬ ಸಂಘಟನೆಯ ಅಧ್ಯಕ್ಷನಾಗಿದ್ದು, ಸುರೇಶ್ ನಾಯ್ಡು & ಪತ್ನಿ ಮಧ್ಯೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆದಿತ್ತು. ಹಾಗಾಗಿ ಪತ್ನಿ ಜೋಶಿತಾ ಕಳೆದ 10 ತಿಂಗಳಿಂದ ತಾಯಿಯ ಮನೆಯಲ್ಲಿ ಇದ್ದಳು. ನಿನ್ನೆ ಮಧ್ಯಾಹ್ನ ಸುರೇಶ್ ನಾಯ್ಡು ಪತ್ನಿ ಹಾಗೂ ಆಕೆಯ ಕುಟುಂಬದವರನ್ನು ಚನ್ನಸಂದ್ರ ಬಳಿ ಮನೆಗೆ ಕರೆಸಿಕೊಂಡಿದ್ದ. ಮಾತಿಗೆ ಮಾತು ಬೆಳೆದು ಪತ್ನಿ, ಅತ್ತೆ, ಮಾವನಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅತ್ತೆ ದೂರು ನೀಡಿದ್ದು, ಸುರೇಶ್ ನಾಯ್ಡು ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.



ಇದನ್ನೂ ಓದಿ : ಸದನಕ್ಕೆ ಸುಳ್ಳು ಮಾಹಿತಿ ಕೊಟ್ರಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್? – ಸಚಿವೆ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ!







