ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ಮೇಲೆ IT ದಾಳಿ!

ಬೆಂಗಳೂರು : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ‘ಬ್ಯಾಸ್ಟಿಯನ್’ ಪಬ್‌ಗೆ ಸಂಕಷ್ಟ ಶುರುವಾಗಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲಾದ ಬೆನ್ನಲ್ಲೇ, ಇದೀಗ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಬ್ಯಾಸ್ಟಿಯನ್ ಪಬ್ ಮೇಲೆ ಇಂದು 15 ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 2023-24ರ ಆದಾಯ ತೆರಿಗೆ ದಾಖಲೆಗಳನ್ನು ಮುಂದಿಟ್ಟುಕೊಂಡು ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದಾರೆ. ಪಬ್‌ನಲ್ಲಿ ಗ್ರಾಹಕರಿಗೆ ನೀಡಲಾದ ಪ್ರತಿ ಬಿಲ್ ಹಾಗೂ ಅವರು ಸಲ್ಲಿಕೆ ಮಾಡಿರುವ ಐಟಿ ರಿಟರ್ನ್ಸ್ (IT Returns) ಎರಡನ್ನೂ ಪಕ್ಕಕ್ಕಿಟ್ಟುಕೊಂಡು ಲೆಕ್ಕಾಚಾರ ಮಾಡುತ್ತಿದ್ದಾರೆ. ಲೆಕ್ಕಾ ಪಕ್ಕಾ ಇರಬೇಕು ಎಂದು ಪಟ್ಟು ಹಿಡಿದಿರುವ ಅಧಿಕಾರಿಗಳು, ಪ್ರತಿಯೊಂದು ವಹಿವಾಟಿನ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.

ಪಬ್‌ಗೆ ಬರುವವರು ಒಂದಲ್ಲ ಒಂದು ರಗಳೆ ಮಾಡಿ ಗಬ್ಬೆಬ್ಬಿಸುತ್ತಿದ್ದಾರೆ ಎಂದು ಸಿಬ್ಬಂದಿ ಈಗಾಗಲೇ ಕಂಗಾಲಾಗಿದ್ದರು. ಅದರ ಬೆನ್ನಲ್ಲೇ ಈ ಐಟಿ ದಾಳಿ ನಡೆದಿರುವುದು ಅವರಿಗೆ ಭರಸಿಡಿಲು ಬಡಿದಂತಾಗಿದೆ. ಈ ಕಡೆ ಪಬ್ ಮಾಲಕಿ, ನಟಿ ಶಿಲ್ಪಾ ಶೆಟ್ಟಿಗೂ ಐಟಿ ದಾಳಿಯ ಸುಳಿವು ಲಭಿಸಿದ್ದು, ಆತಂಕ ಶುರುವಾಗಿದೆ.

ಇತ್ತೀಚೆಗಷ್ಟೇ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪಬ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಐಟಿ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದರೆ ವಹಿವಾಟಿಗೆ ಪೆಟ್ಟು ಬೀಳಲಿದೆ. ಐಟಿ ದಾಳಿ ಬೆನ್ನಲ್ಲೇ ಇಡಿ (ED) ಅಧಿಕಾರಿಗಳು ಎಂಟ್ರಿ ಕೊಡುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ, 2024ರ ಅಂತ್ಯದ ವೇಳೆಗೆ ಬ್ಯಾಸ್ಟಿಯನ್ ಪಬ್‌ಗೆ ಗ್ರಹಚಾರ ಸರಿಯಿಲ್ಲದಂತಿದೆ.

ಇದನ್ನೂ ಓದಿ : ಸದನಕ್ಕೆ ಸುಳ್ಳು ಮಾಹಿತಿ ಕೊಟ್ರಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​? – ಸಚಿವೆ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ!

Btv Kannada
Author: Btv Kannada

Read More